ಮುಂಬೈ: ವೆಂಕಟೇಶ್ ಅಯ್ಯರ್, ಪ್ಯಾಟ್ ಕಮ್ಮಿನ್ಸ್ ಅಬ್ಬರದ ಅರ್ಧಶತಕ ಸಹಾಯದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಐಪಿಎಲ್ 2022ರ ಭಾಗವಾಗಿ ನಡೆದ 14ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಕೆಕೆಆರ್ 24 ಎಸೆತಗಳು ಬಾಕಿರುವಂತೆ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಗೆದ್ದು ಬೀಗಿದೆ. ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್ 56 ರನ್ (15 ಎಸೆತ), ವೆಂಕಟೇಶ್ ಅಯ್ಯರ್ 50 ರನ್ (41 ಎಸೆತ) ಗಳಿಸಿದರು.
ಇದಕ್ಕೂ ಮುನ್ನ ಮುಂಬೈ ಪರ ಸೂರ್ಯಕುಮಾರ್ 52 ರನ್, ತಿಲಕ್ ವರ್ಮಾ 38 ರನ್ ಗಳಿಸಿದ್ದರು.
PublicNext
06/04/2022 11:08 pm