ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ಶಹಬಾಜ್, ಕಾರ್ತಿಕ್ ಅಬ್ಬರ- ಆರ್ ಸಿಬಿಗೆ 4 ವಿಕೆಟ್‌ಗಳಿಂದ ಗೆಲುವು

ಮುಂಬೈ: ಭಾರಿ‌ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಐಪಿಎಲ್ 2022ರ ಭಾಗವಾಗಿ ನಡೆದ 13ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸ್ಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 3 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತ್ತು.

ಬಳಿಕ ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡವು

6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಗೆದ್ದು‌ ಬೀಗಿದೆ‌.‌ ಆರ್ ಸಿಬಿ‌ ಪರ ಶಹಬಾಜ್ ಅಹ್ಮದ್ 45 ರನ್, ದಿನೇಶ್ ಕಾರ್ತಿಕ್ ಅಜೇಯ 44 ರನ್, ಹರ್ಷಲ್ ಪಟೇಲ್ ಅಜೇಯ 9 ರನ್ ಗಳಿಸಿದರು.

ರಾಜಸ್ಥಾನ್ ಪರ ಜೋಸ್ ಬಟ್ಲರ್ ಅಜೇಯ 70 ರನ್, ದೇವದತ್ ಪಡಿಕ್ಕಲ್ 37 ರನ್ ಹಾಗೂ ಶಿಮ್ರಾನ್ ಹೆಟ್ಮೇಯರ್ ಅಜೇಯ 42 ರನ್ ದಾಖಲಿಸಿದರು.

Edited By : Vijay Kumar
PublicNext

PublicNext

05/04/2022 11:29 pm

Cinque Terre

35.13 K

Cinque Terre

13