ಮುಂಬೈ: ನಾಯಕ ಕೆ.ಎಲ್.ರಾಹುಲ್, ದೀಪಕ್ ಹೂಡಾ ಅರ್ಧಶತಕದ ಸಹಾಯದಿಂದ ಲಕ್ನೋ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 170 ರನ್ಗಳ ಗುರಿ ನೀಡಿದೆ.
ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2022ರ 12ನೇ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದೆ.
ಲಕ್ನೋ ಪರ ನಾಯಕ ಕೆ.ಎಲ್.ರಾಹುಲ್ 68 ರನ್ ಹಾಗೂ ದೀಪಕ್ ಹೂಡಾ 51 ರನ್ ಗಳಿಸಿ ಮಿಂಚಿದರೆ, ಮನೀಷ್ ಪಾಂಡೆ (11 ರನ್) ಮತ್ತೆ ಬ್ಯಾಟಿಂಗ್ ವೈಫಲ್ಯ ತೋರಿದರು. ಇನ್ನು ಹೈದರಾಬಾದ್ ಪರ ರೊಮೆರೊ ಶೆಪರ್ಡ್, ವಾಷಿಂಗ್ಟನ್ ಸುಂದರ್ ಹಾಗೂ ಟಿ ನಟರಾಜನ್ ತಲಾ ಎರಡು ವಿಕೆಟ್ ಪಡೆದುಕೊಂಡರು.
PublicNext
04/04/2022 09:23 pm