ಮುಂಬೈ: ನಿನ್ನೆ (ಶುಕ್ರವಾರ) ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರರಾದ ಸುರೇಶ್ ರೈನಾ ಹಾಗೂ ಇರ್ಫಾನ್ ಪಠಾಣ್ ಭಾಗಿಯಾಗಿದ್ದರು. ಈ ವೇಳೆ ಇರ್ಫಾನ್ ಪಠಾಣ್ ಅವರು ರೈನಾ ಹಾಗೂ ನಿರೂಪಕರಿಗೆ ತಮಾಷೆಗೆ ಶಾಕ್ ಕೊಟ್ಟಿದ್ದಾರೆ.
ಇರ್ಫಾನ್ ಪಂಜಾಬ್ ತಂಡ ಪರ ಮಾತನಾಡುತ್ತಿದ್ದಾಗ ರೈನಾ, "ಇರ್ಫಾನ್ ಪಂಜಾಬ್ ಪರ ಆಡಿದ್ದಾರೆ. ಮೂರು ವರ್ಷಗಳ ಕಾಲ. ಪ್ರೀತಿ ಜಿಂಟಾ ಅವರ ಮಾಲೀಕರಾಗಿದ್ದರು" ಎಂದರು. ಈ ವೇಳೆ ಇರ್ಫಾನ್ ಕೋಪಗೊಂಡಂತೆ ಕಾಣಿಕೊಂಡು, "ಇದು ಸರಿಯಲ್ಲ.. ನೀವು ಸ್ತ್ರೀ ಕೋನವನ್ನು ಚರ್ಚೆಯಲ್ಲಿ ತಂದಿದ್ದು ಸರಿಯಲ್ಲ" ಎಂದು ಹೇಳಿ ಫ್ರೇಮ್ ಬಿಟ್ಟು ಬಂದರು. ಈ ವೇಳೆ ರೈನಾ ಅವರಿಗೆ ತಪ್ಪು ಮಾಡಿಬಿಟ್ಟೆ ಎನ್ನುವ ಅಳುಕು ಎದುರಾಯಿತು. ತಕ್ಷಣವೇ ಅವರು ಇರ್ಫಾನ್ ಅವರನ್ನು ಕರೆತರಲು ಹೋದಾಗ ಇದು ತಮಾಷೆ ಎಂದು ಇರ್ಫಾನ್ ಬಹಿರಂಗಪಡಿಸಿದರು. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
02/04/2022 01:34 pm