ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಗೆಲುವು ಸಾಧಿಸಿದ ನಂತರ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಅವರ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬ್ರಾಬೌರ್ನೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ 2022ರ 7ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಲಕ್ನೋ ತಂಡವು 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಲಕ್ನೋಗೆ ಮೊದಲ ಗೆಲುವು ದಾಖಲಿಸಿತು.
ಆಯುಷ್ ಬಡೋನಿ ಮ್ಯಾಚ್ ಫಿನಿಷಿಂಗ್ ಶಾಟ್ ಹೊಡೆದಾಗ ಗಂಭೀರ್ ತಮ್ಮ ಕುರ್ಚಿಯಿಂದ ಜಿಗಿದು ಗಾಳಿಯಲ್ಲಿ ಪಂಚ್ ಹೊಡೆದರು. ಈ ದೃಶ್ಯವು ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
PublicNext
01/04/2022 02:06 pm