ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲಾಗಿದೆ. ಇಂದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದ ಲಕ್ನೋ ತಂಡವು ಗೆಲುವಿನ ಖಾತೆ ತೆರೆದರೆ, ಚೆನ್ನೈ ಸತತ ಎರಡನೇ ಸೋಲಿಗೆ ಗುರಿಯಾಗಿದೆ.
ಐಪಿಎಲ್ 2022ರ 7ನೇ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆ.ಎಲ್.ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 7 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತ್ತು.
211 ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ತಂಡವು 19.3 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ .. ರನ್ ಗಳಿಸಲು ಶಕ್ತವಾಯಿತು. ದಂಡದ ಪರ ಕ್ವಿಂಟನ್ ಡಿ ಕಾಜ್ 61 ರನ್, ನಾಯಕ ಕೆ.ಎಲ್.ರಾಹುಲ್ 40 ರನ್ ಹಾಗೂ ಇವೆನ್ ಲೆವಿಸ್ ಅಜೇಯ 55 ರನ್ ದಾಖಲಿಸಿದರು.
PublicNext
31/03/2022 11:41 pm