ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಿನ್ನೆ (ಸೋಮವಾರ) ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಮಿಂಚಿನ ಕ್ಯಾಚ್ ಹಿಡಿದು ಗಮನಸೆಳೆದಿದ್ದಾರೆ.
ಐಪಿಎಲ್ 2022ನೇ ಆವೃತ್ತಿಯ ಎರಡು ಹೊಸ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅನೇಕ ಮೆಚ್ಚುಗೆಗೆ ಪಾತ್ರರಾದರು. ವರುಣ್ ಆ್ಯರೋನ್ ಬೌಲಿಂಗ್‌ನಲ್ಲಿ ಎವಿನ್ ಲೂವಿಸ್ (10) ರನ್‌ಗಳಿಸಿ ನೀಡಿದ ಕ್ಯಾಚ್‌ಗೆ ಹಿಂದಕ್ಕೆ ಓಡಿ, ಫುಲ್ ಡೈವ್‌ನೊಂದಿಗೆ ಶುಭ್ಮನ್ ಗಿಲ್ ಹಿಡಿದ ಕ್ಯಾಚ್ ಲೀಗ್‌ನ ಹೈಲೈಟ್ ಆಗಿತ್ತು. ಇದು ಟೂರ್ನಿಯ ಬೆಸ್ಟ್ ಕ್ಯಾಚ್ ಆಗಬಹುದು ಎಂಬ ವಿಮರ್ಶೆ ಮಾಡಲಾಗಿದೆ.
PublicNext
29/03/2022 07:51 am