ಮುಂಬೈ: ದೀಪಕ್ ಹೂಡಾ ಹಾಗೂ ಆಯುಷ್ ಬಡೋನಿ ಅವರ ಅಮೋಘ ಅರ್ಧಶತಕದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡಕ್ಕೆ 159;ರನ್‌ಗಳ ಗುರಿ ನೀಡಿದೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2022ರ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.
ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಕೆ.ಎಲ್.ರಾಹುಲ್ (0 ರನ್‌ಗೆ) ವಿಕೆಟ್ ಒಪ್ಪಿಸಿದ್ದು ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತು. ಅದಾದ ಬಳಿಕ ಕ್ಲಿಂಟನ್ ಡಿ ಕಾಕ್ 7 ರನ್, ಎವಿನ್ ಲೂಯಿಸ್ 10 ರನ್, ಮನೀಶ್ ಪಾಂಡೆ 6 ರನ್ ಗಳಿಗೆ ವಿಕೆಟ್ ಒಪ್ಪಿಸಿ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. ಈ ವೇಳೆ ದೀಪಕ್ ಹೂಡ 55 ರನ್, ಆಯುಷ್ ಬಡೋನಿ 54 ರನ್ ಹಾಗೂ ಕೃನಾಲ್ ಪಾಂಡ್ಯ 21 ರನ್‌ಗಳ ಸಹಾಯದಿಂದ ಲಕ್ನೋ ತಂಡವು ಗುಜರಾತ್ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಲು ಸಾಧ್ಯವಾಯಿತು.
PublicNext
28/03/2022 09:26 pm