ಮುಂಬೈ: ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.
ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಟೂರ್ನಿಯ ಭಾಗವಾಗಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 2 ವಿಕೆಟ್ ನಷ್ಟಕ್ಕೆ 205 ರನ್ ದಾಖಲಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 6 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ
ಪಂಜಾಬ್ ಪರ ಭಾನುಕಾ ರಾಜಪಕ್ಸೆ 43 ರನ್, ಶಿಖರ್ ಧವನ್ 43, ನಾಯಕ ಮಯಾಂಕ್ ಅಗರ್ವಾಲ್ 32 ರನ್, ಓಡನ್ ಸ್ಮಿತ್ ಅಜೇಯ 25 ರನ್ ಹಾಗೂ ಎಂ ಶಾರುಖ್ ಖಾನ್ ಅಜೇಯ 24 ರನ್ ಗಳಿಸಿದರು.
ಇದಕ್ಕೂ ಮುನ್ನ ಆರ್‌ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ 88 ರನ್ (57 ಎಸೆತ, 3 ಬೌಂಡರಿ, 7 ಸಿಕ್ಸ್) ಬಾರಿಸಿದರೆ, ಅನುಜ್ ರಾವತ್ 21 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸರ್), ವಿರಾಟ್ ಕೊಹ್ಲಿ ಅಜೇಯ 41 ರನ್ (29 ಎಸೆತ, 1 ಬವಂಡರಿ, 2 ಸಿಕ್ಸ್), ದಿನೇಶ್ ಕಾರ್ತಿಕ್ ಅಜೇಯ 32 ರನ್ (14 ಎಸೆತ, 3 ಬೌಂಡರಿ, 3 ಸಿಕ್ಸ್) ಗಳಿಸಿದ್ದರು.
PublicNext
27/03/2022 11:23 pm