ಐಪಿಎಲ್ 15 ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟ್ ಅಭಿಮಾನಿಗಳು ಇಂದಿನಿಂದ ನೆಚ್ಚಿನ ಟೀಮ್ ಆಟವನ್ನು ಆನಂದಿಸಲಿದ್ದಾರೆ.
ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೆ ಚಾಲನೆ ದೊರೆಯಲಿದೆ.
ಹಾಲಿ ಚಾಂಪಿಯನ್ ಸಿಎಸ್ ಕೆ ವಿರುದ್ಧ ಕಳೆದ ಬಾರಿಯ ರನ್ನರ್ ಅಪ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಾಡಲಿದೆ. ಈ ಮೂಲಕ ಐಪಿಎಲ್ ಟಿ 20 ಜಾತ್ರೆ ಆರಂಭಗೊಳ್ಳಲಿದೆ.
ಮೇ 29 ರಂದು ಎಲ್ಲಾ ಟೂರ್ನಿ ಮುಕ್ತಾಯಗೊಳ್ಳಲಿದ್ದು ಈ ಬಾರಿ 25% ಪ್ರೇಕ್ಷರಿಗೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
PublicNext
26/03/2022 07:57 am