ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 2022 ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಆಟಗಾರರು ತಮ್ಮ ತಂಡವನ್ನು ಸೇರಿಕೊಂಡು ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ಕನ್ನಡಿಗರ ನೆಚ್ಚಿನ, ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೂಡ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಈ ಮಧ್ಯೆ ಆರ್‌ಸಿಬಿ ಸಾಮಾಜಿಕ ಜಾಲತಾಣದ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಿದೆ.
ಸದ್ಯ ಆರ್‌ಸಿಬಿ ತನ್ನ ಆಟಗಾರ ದಿನೇಶ್ ಕಾರ್ತಿಕ್ ಅವರ ಅಭ್ಯಾಸದ ವಿಡಿಯೋಗೆ 'ಬಂದಾ ನೋಡೋ ಡಿಕೆ ಸಾಹೇಬ' ಹಾಡು ಹಾಕಿ ಟ್ವೀಟ್ ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳ ಮನ ಗೆದ್ದಿದೆ.
PublicNext
21/03/2022 05:29 pm