ನವದೆಹಲಿ: ಐಪಿಎಲ್‌ನಲ್ಲಿ ಪಿಎಸ್‌ಎಲ್ ಅನ್ನು ವೈಭವೀಕರಿಸಲು ಪ್ರಯತ್ನಿಸಿದ ಪಾಕಿಸ್ತಾನಿ ಪತ್ರಕರ್ತನಿಗೆ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ರಾಬಿನ್ ಉತ್ತಪ್ಪ ಚಳಿ ಬಿಡಿಸಿದ್ದಾರೆ.
"ಐಪಿಎಲ್ ಹುಟ್ಟಿದಾಗ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿ ಇರಲಿಲ್ಲ. ಆದರೆ ಇತರ ಮಂಡಳಿಗಳು ತಮ್ಮ ಲೀಗ್‌ಗಳನ್ನು ಪರಿಚಯಿಸಿದ ಯುಗದಲ್ಲಿ ಪಿಎಸ್‌ಎಲ್ ವಿಶ್ವಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ ಎಂದು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು" ಎಂದು ಪತ್ರಕರ್ತ ಬರೆದಿದ್ದಾರೆ. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಉತ್ತಪ್ಪ, 'ಮಾರುಕಟ್ಟೆ ಸೃಷ್ಟಿಸಿದ್ದೇ ಐಪಿಎಲ್' ಎಂದು ತಿರುಗೇಟು ನೀಡಿದ್ದಾರೆ.
PublicNext
20/03/2022 11:30 am