ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಆರಂಭಕ ಬ್ಯಾಟ್ಸ್‌ಮನ್ ಆಗಿಯೇ ಮಿಂಚುತ್ತಿದ್ದಾರೆ. ಇವರನ್ನ ಹಿಂದಿಕ್ಕೋ ಆಟಗಾರ ಸದ್ಯಕ್ಕೆ ಇಲ್ಲವೇ ಇಲ್ಲ ಅನ್ನೋ ಮಾತಿದೆ. ಆದರೆ ರೋಹಿತ್ ಶರ್ಮಾ ಮೀರಿಸೋ ಒಬ್ಬ ಬ್ಯಾಟ್ಸ್‌ಮನ್ ಇದ್ದಾರೆ. ಅವಾರು ಬನ್ನಿ, ಹೇಳ್ತಿವಿ.
ರೋಹಿತ್ ಶರ್ಮಾ ಇಂಡಿಯನ್ ಟೀಮ್‌ನ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್.ರೋಹಿತ್ ಗೆ ಈಗಾಗಲೇ 34 ವರ್ಷವೂ ಆಗಿದೆ. ಈ ಹಿನ್ನೆಲೆಯಲ್ಲಿಯೇ ರೋಹಿತ್ ನಂತರ ಯಾರೂ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.
ಹೌದು. ರೋಹಿತ್ ಶರ್ಮಾ ಜಾಗವನ್ನ ತುಂಬಬಲ್ಲ ಪ್ರತಿಭಾವಂತ ಆಟಗಾರ ಇದ್ದಾರೆ. ಅವರೇ ರುತುರಾಜ್ ಗಾಯಕ್ವಾಡ್. ಈ ಯುವ ಆಟಗಾರ ಸದ್ಯ ಸಿಎಸ್‌ಕೆಯ ಆರಂಭಿಕ ಬ್ಯಾಟ್ಸ್‌ಮನ್.
ಆದರೆ, ಗಾಯಕ್ವಾಡ್‌ಗೆ ಟೀಂ ಇಂಡಿಯಾದಲ್ಲಿ ಆಡುವ ಅದೃಷ್ಟ ಇನ್ನೂ ಖುಲಾಯಿಸಿಲ್ಲ. ಸದ್ಯಕ್ಕೆ ಬೆಂಚ್ ಕಾಯೋ ಸ್ಥಿತಿ ಇದೆ.ಆದರೂ ರೋಹಿತ್ ಶರ್ಮಾ ಬಿಟ್ಟರೇ, ಆರಂಭಿಕ ಬ್ಯಾಟ್ಸ್‌ಮನ್ ಆಗಿ ರುತುರಾಜ್ ಮಿಂಚಬಲ್ಲ ಅಂತಲೇ ಈಗ ಹೇಳಲಾಗುತ್ತಿದೆ.
PublicNext
18/03/2022 03:46 pm