ನವದೆಹಲಿ:ಎಂ.ಎಸ್.ಧೋನಿ ನಿಜಕ್ಕೂ ಕೂಲ್ ಬಿಡಿ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಕೂಲ್ ಆಗಿಯೇ ಆನ್ಸರ್ ಮಾಡುತ್ತಾರೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ.
ಐಪಿಎಲ್15 ನೇ ಆವೃತ್ತಿ ಇನ್ನೇನು ಶುರು ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಒಂದು ಸಂವಾದ ಆಯೋಜಿಸಿತ್ತು. ಈ ಸಂವಾದಲ್ಲಿ ಅಭಿಮಾನಿಯೊಬ್ಬರು ಧೋನಿಗೆ ವೈಯುಕ್ತಿಕ ಪ್ರಶ್ನೆ ಒಂದಿದೆ. ಅದನ್ನ ಕೇಳಲಾ ಅಂತಲೇ ಹೇಳುತ್ತಾರೆ.
ಈ ಒಂದು ಪ್ರಶ್ನೆಗೆ ಕೂಲ್ ಆಗಿಯೇ ಆನ್ಸರ್ ಮಾಡುವ ಧೋನಿ, ನೀವು ಪ್ರಶ್ನೆಯನ್ನ ಕೇಳಬಹುದು. ಆದರೆ ಅದಕ್ಕೆ ಉತ್ತರ ಕೊಡಬೇಕಾ ಬೇಡ್ವಾ ಅನ್ನೋದು ನನಗೆ ಬಿಟ್ಟದ್ದು ಅಂತಲೇ ತಿಳಿಸಿ ಬಿಡ್ತಾರೆ.
ಇಷ್ಟಾದ ಮೇಲೆ ಆ ಅಭಿಮಾನಿ ಪ್ರಶ್ನೆ ಕೇಳಿಯೇ ಬಿಟ್ಟಿದ್ದಾರೆ. ನಿಮ್ಮ ಮನೆಯಲ್ಲಿ ಯಾರೂ ನಂಬರ್ ಒನ್ ಅಂತಲೇ ಕೇಳಿದ ಆ ಪ್ರಶ್ನೆಗೆ, ಮನೆಯಲ್ಲಿ ಹೆಂಡತಿಯರೇ ನಂಬರ್ ಒನ್. ಅದರಂತೆ ನನ್ನ ಹೆಂಡ್ತಿ ಮನೆಯಲ್ಲಿ ನಂಬರ್ ಒನ್ ಅಂತಲೇ ಹೇಳಿದ್ದಾರೆ. ಆಗ ಅಲ್ಲಿ ನೆರೆದಿದ್ದ ಜನ ನಗೆ ಗಡಲಲ್ಲೂ ತೇಲಿ ಖುಷಿ ಪಟ್ಟಿದ್ದಾರೆ.
PublicNext
17/03/2022 06:13 pm