ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿದೆ. ಐಪಿಎಲ್ ಅಭೂತಪೂರ್ವ ಯಶಸ್ಸಿನ ಬಳಿಕ ವಿಶ್ವದ ವಿವಿಧ ರಾಷ್ಟ್ರಗಳು ಕೂಡ ಲೀಗ್ ಸಂಸ್ಕೃತಿ ಅಳವಡಿಸಿಕೊಂಡು ತಮ್ಮದೇ ಟೂರ್ನಿಗಳನ್ನು ಆಯೋಜಿಸಲು ಆರಂಭಿಸಿದವು. ಅದರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಕೂಡ ಒಂದಾಗಿದೆ.
ಐಪಿಎಲ್‌ಗೆ ಪೈಪೋಟಿ ನೀಡಲು ಪಿಎಸ್‌ಎಲ್ ಭಾರಿ ಪೈಪೋಟಿ ನಡೆಸುತ್ತಾ ಬಂದಿದೆ. ಇತ್ತೀಚೆಗೆ ಮಾತನಾಡಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಝ್ ರಾಜಾ, ಪಿಎಸ್‌ಎಲ್ ಟೂರ್ನಿಯಲ್ಲಿ ಕೆಲ ಕ್ರಾಂತಿಕಾರಿ ಬದಲಾವಣೆಗಳನ್ನು ಖಂಡಿತಾ ಐಪಿಎಲ್‌ಗೆ ಪೈಪೋಟಿ ನೀಡಬಹುದು. ಆಟಗಾರರ ವಿಂಗಡಣೆ ವ್ಯವಸ್ಥೆಯನ್ನು ಬದಿಗಿಟ್ಟು, ಹರಾಜು ಪ್ರಕ್ರಿಯೆ ಅಳವಡಿಸಿಕೊಂಡರೆ ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನು ಆಕರ್ಷಿಸಲು ಸಾಧ್ಯ ಎಂದಿದ್ದಾರೆ.
"ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತಹ ಆಸ್ತಿಯನ್ನು ಸೃಷ್ಟಿಸಬೇಕಿದೆ. ಸದ್ಯಕ್ಕೆ ನಮ್ಮ ಬಳಿ ಪಿಎಸ್‌ಎಲ್ ಮತ್ತು ಐಸಿಸಿ ಹಣ ಬಿಟ್ಟರೆ ಬೇರೆ ಏನೂ ಇಲ್ಲ. ಪಿಎಲ್‌ಎಲ್ ಟೂರ್ನಿಯ ಮುಂದಿನ ಆವೃತ್ತಿಯ ವ್ಯವಸ್ಥೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಮುಂದಿನ ವರ್ಷದಿಂದ ಆಟಗಾರರ ಹರಾಜು ಪ್ರಕ್ರಿಯೆ ಶುರು ಮಾಡಬೇಕೆಂದಿದ್ದೇನೆ. ಇದಕ್ಕೆ ಮಾರುಕಟ್ಟೆ ಕೂಡ ಪೂರಕವಾಗಿದೆ. ಫ್ರಾಂಚೈಸಿ ಮಾಲೀಕರ ಬಳಿ ಈ ಕುರಿತಾಗಿ ಚರ್ಚೆ ಮಾಡಲಿದ್ದೇವೆ" ಎಂದು ರಮೀಝ್ ರಾಜಾ ಕ್ರಿಕ್‌ಇನ್ಫೋಗೆ ಮಾಹಿತಿ ನೀಡಿದ್ದಾರೆ.
PublicNext
15/03/2022 04:06 pm