ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಎಲ್ಲಾ 10 ತಂಡಗಳು ತನ್ನ ನಾಯಕನನ್ನು ಘೋಷಿಸಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿನ್ನೆಯಷ್ಟೇ (ಶನಿವಾರ) ಹೊಸ ಕ್ಯಾಪ್ಟನ್ ಅನೌನ್ಸ್ ಮಾಡಿದೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಬರೋಬ್ಬರಿ 8 ಕೋಟಿ ನೀಡಿ ಖರೀದಿಸಿದ್ದ ಫಾಫ್ ಡು ಪ್ಲೆಸಿಸ್ಗೆ ಆರ್‌ಸಿಬಿ ಕ್ಯಾಪ್ಟನ್ ಪಟ್ಟ ಕಟ್ಟಿದೆ. ಹೊಸ ನಾಯಕನಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ.
ಆರ್‌ಸಿಬಿ ಪರ್ಫೆಕ್ಟ್ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಆಗಲಿದ್ದಾರೆ. ಇದೇನು ಸರ್ಪ್ರೈರ್ಸ್ ಅಲ್ಲ, ಡು ಪ್ಲೆಸಿಸ್ ಓಷನ್ ಇದ್ದಂಗೆ. ಸಲ ಕಪ್ ನಮ್ದೇ. ಫಾಫ್ ಡು ಪ್ಲೆಸಿಸ್ಗೆ ಕೊಹ್ಲಿ, ಮ್ಯಾಕ್ಸ್ವೆಲ್ ಸಪೋರ್ಟ್ ಇರಲಿದೆ. ಈ ಬಾರಿ ಸೀಸನ್ ಸಖತ್ ಎಂಟರ್ಟೈನಿಂಗ್ ಆಗಲಿದೆ ಎಂದು ಎಬಿಡಿ ಹೇಳಿದ್ದಾರೆ.
PublicNext
13/03/2022 08:54 am