ಹ್ಯಾಮಿಲ್ಟನ್: ಸ್ಮೃತಿ ಮಂದಾನ ಹಾಗೂ ಹರ್ಮನ್ ಪ್ರೀತ್ ಕೌರ್ ಅವರ ಅಬ್ಬರದ ಅರ್ಧಶತಕದ ಸಹಾಯದಿಂದ ಭಾರತ ಮಹಿಳಾ ತಂಡವು ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧ 155 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಹ್ಯಾಮಿಲ್ಟನ್ ನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಭಾರತವು ಸ್ಮೃತಿ 123 ರನ್, ಕೌರ್ 109 ರನ್ಗಳ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 317 ರನ್ ಬಾರಿಸಿತ್ತು.
ಬಳಿಕ 318 ರನ್ಗಳ ಗುರಿ ಬೆನ್ನಟ್ಟಿದ ವಿಂಡೀಸ್ ಪಡೆ 40.3 ಓವರ್ಗಳಲ್ಲಿ ಕೇವಲ 162 ರನ್ ಗಳಿಸಿ ಸರ್ವಪತನ ಕಂಡಿತು.
PublicNext
12/03/2022 02:24 pm