ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಪಾರ್ಥೀವ ಶರೀರವನ್ನ ಥಾಯ್‌ಲ್ಯಾಂಡ್‌ನಿಂದ 6 ದಿನಗಳ ಬಳಿಕ ಈಗ ಆಸ್ಟ್ರೇಲಿಯಾಗೆ ತರಲಾಗಿದೆ. ವಿಮಾನದ ಮೂಲಕ ತರಲಾಗಿರೋ ಪಾರ್ಥಿವ ಶರೀರಕ್ಕೆ ರಾಷ್ಟ್ರ ಧ್ವಜ ಹೊದಿಸಿ ಗೌರವಿಸಲಾಗಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿರೋ ಅವರ ನಿವಾಸಕ್ಕೆ ಪ್ರೈವೆಟ್ ಜೆಟ್ ಮೂಲಕವೇ ಪಾರ್ಥೀವ ಶರೀರವನ್ನ ತರಲಾಗಿದೆ.
ಶೇನ್ ವಾರ್ನ್ ಹೃದಯಾಘಾತದಿಂದ ಥಾಯ್ ಲ್ಯಾಂಡ್‌ನಲ್ಲಿ ನಿಧನರಾಗಿದ್ದರು. 6 ದಿನದ ಬಳಿಕ ಈಗ ಅವರ ಕುಟುಂಬ ಶೇನ್ ವಾರ್ನ್ ತಾಯ್ನಾಡಿಗೆ ಪಾರ್ಥೀವ ಶರೀರವನ್ನ ತೆಗೆದುಕೊಂಡು ಹೋಗಿದೆ.
PublicNext
11/03/2022 08:40 am