ಹ್ಯಾಮಿಲ್ಟನ್: ಅಮೆಲಿಯಾ ಕೆರ್ ಹಾಗೂ ಆಮಿ ಸ್ಯಾಟರ್ಥ್ವೈಟ್ ಅರ್ಧಶತಕದಿಂದ ನ್ಯೂಜಿಲೆಂಡ್ ಮಹಿಳಾ ತಂಡವು ಭಾರತದ ವನಿತೆಯರ ತಂಡಕ್ಕೆ 261 ರನ್ಗಳ ಗುರಿ ನೀಡಿದೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಹ್ಯಾಮಿಲ್ಟನ್ನಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅವರು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದೆ. ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ 50 ರನ್, ಆಮಿ ಸ್ಯಾಟರ್ಥ್ವೈಟ್ 75 ರನ್, ಕೇಟಿ ಮಾರ್ಟಿನ್ 41 ರನ್ ಹಾಗೂ ನಾಯಕಿ ಸೋಫಿ ಡಿವೈನ್ 35 ರನ್ ಗಳಿಸಿದರು.
ಇನ್ನು ಭಾರತ ಪರ ಪೂಜಾ ವಸ್ತ್ರಕರ್ 4 ವಿಕೆಟ್ ಕಿತ್ತು ಮಿಂಚಿದರೆ, ರಾಜೇಶ್ವರಿ ಗಾಯಕವಾಡ 2 ವಿಕೆಟ್, ದೀಪ್ತಿ ಶರ್ಮಾ ಹಾಗೂ ಜೂಲನ್ ಗೋಸ್ವಾಮಿ ತಲಾ ಒಂದು ವಿಕೆಟ್ ಪಡೆದರು.
PublicNext
10/03/2022 10:35 am