ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ನಾಯಕಿ ಬಿಸ್ಮಾ ಮರೂಫ್ ಮಗಳೊಂದಿಗೆ ಭಾರತೀಯ ವನಿತೆಯರು : ಫೋಟೋ ವೈರಲ್

ಮೌಂಟ್ ಮಾಂಗನುಯಿ : ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 107 ರನ್ ಗಳ ಅಂತರದಿಂದ ಭಾರತ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇನ್ನು ಇಂದಿನ ಪಂದ್ಯದ ಮುಕ್ತಾಯದ ನಂತರ ಭಾರತೀಯ ವನಿತೆಯರು ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮರೂಫ್ ಅವರ ಆರು ತಿಂಗಳ ಮಗಳು ಫಾತಿಮಾಳೊಂದಿಗೆ ಕೆಲ ಕಾಲ ಎಂಜಾಯ್ ಮಾಡಿದ್ದಾರೆ.

ಕಂದ ಫಾತಿಮಾಳನ್ನು ಭಾರತೀಯ ವನಿತೆಯರು ಮುದ್ದಾಡುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ನಾವು ಈ ದೇಶಗಳ ನಡುವೆ ಈ ರೀತಿಯ ಬಾಂಧವ್ಯವನ್ನು ಬಯಸುತ್ತೇವೆ" ಎಂದು ಬರೆದಿದ್ದಾರೆ.

ಐಸಿಸಿ ಇನ್ ಸ್ಟಾಗ್ರಾಮ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡು, "ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಉತ್ಸಾಹದಲ್ಲಿ ಪುಟ್ಟ ಫಾತಿಮಾ ಅವರ ಮೊದಲ ಪಾಠ" ಎಂದು ಬರೆದಿದ್ದಾರೆ.

Edited By : Nirmala Aralikatti
PublicNext

PublicNext

06/03/2022 07:51 pm

Cinque Terre

66.39 K

Cinque Terre

12

ಸಂಬಂಧಿತ ಸುದ್ದಿ