ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಸಾವಿಗೆ ಜಗತ್ತಿನೆಲ್ಲೆಡೆ ಕಂಬನಿ

ಹೈದರಾಬಾದ್​: ಆಸ್ಟ್ರೇಲಿಯಾ ಕ್ರಿಕೆಟ್​ನ ದಂತಕಥೆ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ದಿಢೀರ್​ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಟೀಂ ಇಂಡಿಯಾ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

52 ವರ್ಷದ ಮಾಜಿ ಕ್ರಿಕೆಟಿಗನ ದಿಢೀರ್ ಸಾವಿನಿಂದಾಗಿ ಕ್ರಿಕೆಟ್ ಲೋಕ ಆಘಾತಕ್ಕೊಳಗಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ಆಟಗಾರನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನಮ್ಮಿಂದ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರಾದ ಸೂಪರ್​ ಸ್ಟಾರ್​ ವಾರ್ನ್​ ಇನ್ನಿಲ್ಲ. ಬದುಕು ಬಹಳ ಸೂಕ್ಷ್ಮವಾಗಿದೆ. ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ಹೇಳಲಾಗದಷ್ಟು ಆಘಾತವಾಯಿತು. ಶ್ರೇಷ್ಠ ಆಟಗಾರರಲ್ಲಿ ಶೇನ್ ವಾರ್ನ್ ಸಹ ಒಬ್ಬರು. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಶೇನ್ ವಾರ್ನ್ ನಿಧನದ ಬಗ್ಗೆ ವಿನಾಶಕಾರಿ ಸುದ್ದಿ ಕೇಳಿದೆ. ನಾನು ಎಷ್ಟು ಆಘಾತ ಮತ್ತು ದುಃಖಿತನಾಗಿದ್ದೇನೆ ಎಂದು ವಿವರಿಸಲು ಪದಗಳಿಲ್ಲ ಎಂದಿದ್ದಾರೆ ಹಾಗೂ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಶಿಖರ್ ಧವನ್​: ಶೇನ್​ ವಾರ್ನ್​ ಸಾವಿನ ಸುದ್ಧಿ ಕೇಳಿ ಆಘಾತವಾಗಿದೆ. ಕ್ರಿಕೆಟ್​ಗೆ ತುಂಬಲಾರದ ನಷ್ಟ. ನನ್ನ ಬಳಿ ಯಾವುದೇ ಪದಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಹಾನೆ: ಶೇನ್​ ವಾರ್ನ್​ ಇನ್ನಿಲ್ಲ ಎಂಬ ಮಾತು ಕೇಳಿ ಶಾಕ್ ಆಗಿದೆ. ನಿಮ್ಮೊಂದಿಗೆ ಅತ್ಯದ್ಭುತವಾದ ಕೆಲವೊಂದು ವರ್ಷ ಜೊತೆಯಾಗಿ ಕಳೆದಿರುವುದಕ್ಕೆ ಹೆಮ್ಮೆ ಇದೆ.

ಗೌತಮ್ ಗಂಭೀರ್​: ಕೆಲವೇ ಕೆಲ ಪ್ರತಿಭೆಗಳೊಂದಿಗೆ ನಿಮ್ಮ ಮನೋಭಾವವನ್ನು ಹೊಂದಿಸಬಹುದು. ಬೌಲಿಂಗ್​ ಅನ್ನು ಮ್ಯಾಜಿಕ್​ನಂತೆ ಕಾಣುವ ರೀತಿ ಮಾಡಿದ್ದೀರಿ.

ವಖಾರ್ ಯೂನಿಸ್​: ಶೆನ್ ವಾರ್ನ್​ ಇನ್ನಿಲ್ಲ. ಈ ಸುದ್ದಿ ಕೇಳಿ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಸುದ್ದಿ ನಮ್ಮ ಕ್ರಿಕೆಟ್​ ಜಗತ್ತಿಗೆ ದೊಡ್ಡ ನಷ್ಟ. ಗುಡ್​ಬೈ ಲೆಜೆಂಡ್.

ಕುಮಾರ್ ಸಂಗಕ್ಕಾರ: ನಿಜಕ್ಕೂ ಇದೊಂದು ಶಾಕ್. ಸ್ನೇಹಿತನ ಕಳೆದುಕೊಂಡಿರುವ ಬಗ್ಗೆ ಆಘಾತವಾಗಿದೆ. ನಂಬಲು ಸಾಧ್ಯವಾಗುತ್ತಿಲ್ಲ.

ಇದರ ಜೊತೆಗೆ ರೋಹಿತ್ ಶರ್ಮಾ, ರಿಷಭ್ ಪಂತ್, ಬ್ರಾಥ್​ವೈಟ್, ವಾಷಿಂಗ್ಟನ್ ಸುಂದರ್​, ಹರ್ಷಾ ಬೋಗ್ಲೆ ಸೇರಿ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Edited By : Vijay Kumar
PublicNext

PublicNext

05/03/2022 07:13 am

Cinque Terre

46.41 K

Cinque Terre

1

ಸಂಬಂಧಿತ ಸುದ್ದಿ