ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SL 1st Test: ಅರ್ಧಶತಕದ ಹೊಸ್ತಿಲಲ್ಲಿ ಕೊಹ್ಲಿ ಔಟ್‌, ರೋಹಿತ್ ಸ್ಟನ್- ವಿಡಿಯೋ ವೈರಲ್

ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕದ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ ಔಟ್‌ ಆಗಿದ್ದಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ವಿರಾಟ್‌ ಕೊಹ್ಲಿ 44ನೇ ಓವರ್‌ನ 3ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್‌ ಆದರು. ಎಡಗೈ ಸ್ಪಿನ್ನರ್‌ ಲಸಿತ್ ಎಂಬುಲ್ದೇನಿಯ ಎದುರು ಏಕಾಗ್ರತೆ ಕಳೆದುಕೊಂಡವರಂತೆ ಕಂಡ ವಿರಾಟ್‌ ತಿರುವು ಪಡೆದ ಚೆಂಡನ್ನು ಡಿಫೆನ್ಸ್‌ ಮಾಡುವಲ್ಲಿ ವಿಫಲರಾಗಿ ಬೌಲ್ಡ್‌ ಔಟ್‌ ಆದರು. 45 ರನ್‌ ಗಳಿಸಿ ವಿರಾಟ್‌ ಕೊಹ್ಲಿ ಔಟಾಗಿದ್ದು, ಡಗೌಟ್‌ನಲ್ಲಿ ಕುಳಿತಿದ್ದ ಕ್ಯಾಪ್ಟನ್‌ ರೋಹಿತ್ ಶರ್ಮಾಗೆ ಅಚ್ಚರಿ ತಂದೊಡ್ಡಿತು.

ಇದೀಗ ವಿರಾಟ್‌ ವಿಕೆಟ್ ಪತನವಾದ ಬಳಿಕ ರೋಹಿತ್ ಬೇಸರಗೊಂಡ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ರೋಹಿತ್-ವಿರಾಟ್‌ ನಡುವೆ ವೈಮನಸ್ಸಿದೆ ಎಂದು ಹೇಳುವರಿಗೆ ಈ ವಿಡಿಯೋ ಉತ್ತರ ಕೊಡಬಲ್ಲದು ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

Edited By : Vijay Kumar
PublicNext

PublicNext

04/03/2022 05:29 pm

Cinque Terre

50.09 K

Cinque Terre

0

ಸಂಬಂಧಿತ ಸುದ್ದಿ