ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SL 1st Test: ಮೈದಾನದಲ್ಲೇ ಪತ್ನಿ ಅನುಷ್ಕಾಗೆ ವಿರಾಟ್ ಕಿಸ್ - ವಿಡಿಯೋ ವೈರಲ್

ಮೊಹಾಲಿ: ಶ್ರೀಲಂಕಾ ವಿರುದ್ಧ ಇಂದು ಆರಂಭವಾಗಿರುವ ಟೆಸ್ಟ್ ಪಂದ್ಯವು ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಮಹತ್ವದ್ದಾಗಿದೆ. ಇದು ಅವರ 100ನೇ ಟೆಸ್ಟ್ ಪಂದ್ಯ. ಈ ಮೂಲಕ ವಿರಾಟ್ ಕೊಹ್ಲಿ ಕೆಲವೇ ಕೆಲವು ದಿಗ್ಗಜ ಆಟಗಾರರ ಸಾಲಿಗೆ ವಿರಾಟ್ ಕೂಡ ಇದೀಗ ಸೇರ್ಪಡೆಯಾಗಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ಕೋಚ್ ರಾಹುಲ್ ದ್ರಾವಿಡ್ ಕೈಯಿಂದ ಬಿಸಿಸಿಐ ವಿಶೇಷ ಸನ್ಮಾನ ಏರ್ಪಡಿಸಿತ್ತು. ಮೊಹಾಲಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಎಲ್ಲ ಆಟಗಾರರು ಮತ್ತು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಉಪಸ್ಥಿತರಿದ್ದರು. ಕೊಹ್ಲಿಗೆ ಕೋಚ್ ರಾಹುಲ್ ದ್ರಾವಿಡ್ ಕೈಯಿಂದ ವಿಶೇಷ 100ನೇ ಟೆಸ್ಟ್ ಕ್ಯಾಪ್ ಅನ್ನು ಗೌರವ ಪೂರ್ವಕವಾಗಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಕೊಹ್ಲಿ ಪಕ್ಕದಲ್ಲೇ ಅನುಷ್ಕಾ ಕೂಡ ಇದ್ದರು. ಕ್ಯಾಪ್ ನೀಡಿದ ಬಳಿಕ ಕೊಹ್ಲಿ ಅವರು ಅನುಷ್ಕಾ ಬಳಿ ತೆರಳಿ ಹಗ್ ಮಾಡಿ ಮುತ್ತಿಟ್ಟರು. ಕಠಿಣದ ಸಂದರ್ಭವಿರಲಿ ಅಥವಾ ಖುಷಿಯ ವಿಚಾರ ಇರಲಿ ಸದಾ ಕೊಹ್ಲಿ ಜೊತೆಗೇ ಇರುವ ಅನುಷ್ಕಾ ಕೂಡ ಕೊಹ್ಲಿಯನ್ನು ಹಗ್ ಮಾಡಿ ಶುಭಕೋರಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Edited By : Vijay Kumar
PublicNext

PublicNext

04/03/2022 02:51 pm

Cinque Terre

68.22 K

Cinque Terre

2