ಮೊಹಾಲಿ : ಇಂದು ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ.ಈ ಮೂಲಕ ವಿಶ್ವದಲ್ಲಿ100 ಟೆಸ್ಟ್ ಪಂದ್ಯ ಆಡಿದ ಕೆಲವೇ ಕೆಲವು ದಿಗ್ಗಜ ಆಟಗಾರರ ಸಾಲಿಗೆ ವಿರಾಟ್ ಸೇರ್ಪಡೆಯಾಗುತ್ತಿದ್ದಾರೆ.
ಹೌದು ಇಂದು ಪ್ರವಾಸಿ ಶ್ರೀಲಂಕಾ ವಿರುದ್ಧ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವಾಗಿದ್ದರೆ, ರೋಹಿತ್ ಶರ್ಮಗೆ ಭಾರತ ಟೆಸ್ಟ್ ತಂಡದ ನಾಯಕರಾಗಿ ಮೊದಲ ಸವಾಲಾಗಿದೆ.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಮಯಾಂಕ್ ಅಗರ್ವಾಲ್, ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ) ಹನುಮ ವಿಹಾರಿ/ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಜಯಂತ್ ಯಾದವ್/ಕುಲದೀಪ್/ಸೌರಭ್ ಕುಮಾರ್, ಮೊಹಮದ್ ಶಮಿ/ಸಿರಾಜ್, ಜಸ್ಪ್ರೀತ್ ಬುಮ್ರಾ.
ಸಂಭಾವ್ಯ ತಂಡ: ದಿಮುತ್ ಕರುಣರತ್ನೆ (ನಾಯಕ), ಲಹಿರು ಥಿರಿಮನ್ನೆ, ಪಥುಮ್ ನಿಸ್ಸಂಕ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿಸಿಲ್ವ, ದಿನೇಶ್ ಚಾಂಡಿಮಲ್/ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲ (ವಿ.ಕೀ), ಸುರಂಗ ಲಕ್ಮಲ್, ಲಸಿತ್ ಎಂಬುಲ್ಡೆನಿಯಾ, ಪ್ರವೀಣ್ ಜಯವಿಕ್ರಮ/ವಿಶ್ವ ಫೆರ್ನಾಂಡೊ, ಲಹಿರು ಕುಮಾರ.
ಪಂದ್ಯ ಆರಂಭ: ಬೆಳಗ್ಗೆ 9.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
PublicNext
04/03/2022 08:57 am