ನವದೆಹಲಿ: ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ನೀರಸ ಪ್ರದರ್ಶನ ನೀಡೋ ಆಟಗಾರರ ವೇತನಕ್ಕೆ ಕತ್ತರಿ ಹಾಕಿದೆ. ಹಿಂಬಡ್ತಿನೂ ಅಂತಹ ಆಟಗಾರರಿಗೆ ಕೊಟ್ಟಿದೆ.
ನಿಜ,ಸ್ಟಾರ್ ಆಟಗಾರರ ಪ್ರದರ್ಶನದಲ್ಲಿ ನೀರಸ ಪ್ರದರ್ಶನ ಕಾಣುತ್ತಿದೆ. ಅಂತಹ ಆಟಗಾರರ ವೇತನದಲ್ಲಿ ಬಿಸಿಸಿಐ ಕತ್ತರಿ ಹಾಕಿದೆ. ಯುವ ಆಟಗಾರರಿಗೂ ಹೆಚ್ಚಿನ ಮಹತ್ವದ ಕೊಟ್ಟು ಅವರಿಗೆ ಪ್ರೋತ್ಸಾಹಿಸುತ್ತಿದೆ.
ಹೌದು.ಸೆಲೆಕ್ಷನ್ ಕಮಿಟಿ ಈಗಾಗಲೇ ಕೆಲವು ನೀರಸ ಪ್ರದರ್ಶನ ಕೊಟ್ಟಿರೋ ಆಟಗಾರರನ್ನ ಕೈ ಬಿಟ್ಟಿದೆ ಕೂಡ. ಅವರಲ್ಲಿ ಚೇತೇಶ್ವರ್ ಪೂಜಾರ್,ಅಜಿಂಕ್ಯಾ ರಹಾನೆ, ಇಶಾಂತ್ ಶರ್ಮಾ, ವೃದ್ಧಿಮಾನ್ ಸಹಾ ಅವರನ್ನ ಈಗಾಗಲೇ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿದೆ.
ಇಶಾಂತ್,ರಹಾನೆ ಮತ್ತು ಪೂಜಾರ್ ಈ ಹಿಂದೆ ಎ ದರ್ಜೆಯ ಆಟಗಾರರಾಗಿದ್ದರು. ಈಗ ಇವರನ್ನ ಬಿ ದರ್ಜೆಯ ಆಟಗಾರರಾಗಿದ್ದಾರೆ. ಬಿ ದರ್ಜೆಯಲ್ಲಿದ್ದ ವೃದ್ಧಿಮಾನ್ ಸಹಾ ಈಗ ಸಿ ದರ್ಜೆಯ ಆಟಗಾರನೇ ಆಗಿಬಿಟ್ಟಿದ್ದಾರೆ.T20 ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯಾಗೆ ನೇರವಾಗಿ ಸಿ ಗ್ರೇಡ್ ಗೆಎ ಇಳಿದು ಬಿಟ್ಟಿದ್ದಾರೆ.
ಎ ಪ್ಲಸ್ ಗ್ರೇಡ್ ನ ಆಟಗಾರರು 7 ಕೋಟಿ ಸಂಭಾವನೆ ಪಡೆಯುತ್ತಾರೆ. ಎ ಗ್ರೇಡ್ ನವರಿಗೆ 5 ಕೋಟಿ ಸಂಭಾವನೆ ಕೊಡಲಾಗುತ್ತದೆ. ಬಿ ಗ್ರೇಡ್ ಗೆ ಆಟಗಾರರಿಗೆ 3 ಕೋಟಿ ಸಂಭಾವನೆ ಇರುತ್ತದೆ. ಸಿ ಗ್ರೇಡ್ ಆಟಗಾರರಿಗೆ ಒಂದು ಕೋಟಿ ಇರುತ್ತದೆ. ಒಟ್ಟಾರೆ ಬಿಸಿಸಿಐ ಸಾಕಷ್ಟು ಬದಲಾವಣೆ ಮಾಡಿ ಯುವ ಆಟಗಾರರಿಗೆ ಮಣೆ ಆಗುತ್ತಿದೆ.
PublicNext
03/03/2022 10:51 pm