ಮೊಹಾಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ ನೂರು ಪಂದ್ಯಗಳನ್ನು ಆಡಲು ನನಗೆ ಸಾಧ್ಯವಾಗುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನನ್ನ ಪ್ರಕಾರ ನಿಜವಾದ ಕ್ರಿಕೆಟ್ ಎಂದರೆ ಟೆಸ್ಟ್ ಕ್ರಿಕೆಟ್ ಎಂದು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸಾಧನೆ ಕುರಿತು ಕೊಹ್ಲಿ ಮಾತನಾಡಿರುವ ವಿಡಿಯೊವೊಂದನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 'ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇದು ಸುದೀರ್ಘ ಪ್ರಯಾಣವಾಗಿತ್ತು. ಈ ನೂರು ಟೆಸ್ಟ್‌ಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಇಷ್ಟು ಪಂದ್ಯಗಳನ್ನಾಡಲು ಸಾಧ್ಯವಾಗಿದ್ದಕ್ಕೆ ಕೃತಜ್ಞನಾಗಿದ್ದೇನೆ. ದೇವರ ದಯೆ ನನ್ನ ಮೇಲಿದೆ. ಫಿಟ್‌ನೆಸ್ ಕಾಪಾಡಿಕೊಳ್ಳಲು ಪರಿಶ್ರಮ ಹಾಕಿದ್ದೇನೆ. ನನ್ನ ಪಾಲಿಗೆ, ನನ್ನ ಕುಟುಂಬ ಮತ್ತು ತರಬೇತುದಾರರ ಪಾಲಿಗೆ ಇದು ಬಹುದೊಡ್ಡ ಕ್ಷಣ. ತುಂಬಾ ವಿಶೇಷವಾದ ಸಂದರ್ಭವಿದು' ಎಂದು ವಿರಾಟ್ ಹೇಳಿಕೊಂಡಿದ್ದಾರೆ.
PublicNext
03/03/2022 04:52 pm