ಆಸಿಸ್ ಸ್ಟಾರ್ ಪ್ಲೆಯರ್ ಡೇವಿಡ್ ವಾರ್ನರ್ ಒಂದು ಎಮೋಷ್ನಲ್ ಪೋಸ್ಟ್ ಮಾಡಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರೋ ಡೇವಿಡ್ ಈ ಪೋಸ್ಟ್ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
ಡೇವಿಡ್ ವಾರ್ನರ್ ಫ್ಯಾಮಿಲಿ ಜೊತೆಗೆ ತುಂಬಾ ಅಟ್ಯಾಚ್ ಆಗಿದ್ದಾರೆ. ಮಕ್ಕಳು-ಹೆಂಡ್ತಿ ಅಂತ ಎಲ್ಲರ ಜೊತೆಗೂ ಅತಿ ಹೆಚ್ಚು ಟೈಮ್ ಸ್ಪೆಂಡ್ ಮಾಡುತ್ತಾರೆ.
ಹೌದು. ಡೇವಿಡ್ ಫ್ಯಾಮಿಲಿ ಬಿಟ್ಟಿರೋದೇ ಇಲ್ಲ.ಆದರೆ ಈಗ ಪಾಕಿಸ್ತಾನ್ ಪ್ರವಾಸದಲ್ಲಿಯೇ ಇದ್ದಾರೆ. ಪಾಕಿಸ್ತಾನ್ ವಿರುದ್ಧ ನಡೆಯೋ ಆಸ್ಟ್ರೇಲಿಯಾದ ಮೂರು ಟೆಸ್ಟ್ ಮೂರು ಏಕ ದಿನ ಪಂದ್ಯ ಹಾಗೂ ಟಿ20 ಪಂದ್ಯಗಳಿವೆ. ಈ ಪಂದ್ಯ ಆಡಲೆಂದೇ ಡೇವಿಡ್ ವಾರ್ನರ್ ಇಲ್ಲಿಗೆ ಬಂದಿದ್ದಾರೆ.
ಇಲ್ಲಿಗೆ ಬರೋ ಮೊದಲೇ ಡೇವಿಡ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, 'ಯಾವಾಗಲೂ ನನ್ನ ಹುಡುಗಿಯರಿಗೆ ಗುಡ್ ಬೈ ಹೇಳೋದು ಕಷ್ಟ. ಕಳೆದ ಕೆಲ ತಿಂಗಳಲ್ಲಿ ನಾವೆಲ್ಲ ಮಸ್ತ್ ಮಜಾ ಮಾಡಿದ್ದೇವೆ. ಆದರೆ ಇವರಿಂದ ಕೆಲ ವಾರಗಳ ಕಾಲ ದೂರ ಇರಬೇಕಿದೆ. ಈಗ ನಾನು ನಿಮ್ಮನ್ನ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಪತ್ನಿ ಮತ್ತು ಮಕ್ಕಳ ಬಗ್ಗೆ ಡೇವಿಡ್ ಪೋಸ್ಟ್ ಮಾಡಿದ್ದಾರೆ.
PublicNext
01/03/2022 10:14 pm