ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನನ್ನನ್ನು ಮುಸ್ಲಿಂ ಎಂದು ಟ್ರೋಲ್​ ಮಾಡೋರು ನಿಜವಾದ ಭಾರತೀಯರಲ್ಲ'

ನವದೆಹಲಿ: ಕಳೆದ ವರ್ಷ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯ ಸೋತಾಗ ತಮ್ಮ ವಿರುದ್ಧ ಎದುರಾದ ಟ್ರೋಲ್​ಗಳ ಬಗ್ಗೆ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತದ ಮೇಲಿನ ನನ್ನ ಅಭಿಮಾನ, ಪ್ರೀತಿಯನ್ನ ನಾನು ಯಾರಿಗೂ ನಿರೂಪಿಸಬೇಕಾದ ಅವಶ್ಯಕತೆ ಇಲ್ಲ. ನಾನು ನನ್ನ ದೇಶವನ್ನ ಗೌರವಿಸುತ್ತೇನೆ, ದೇಶಕ್ಕಾಗಿ ಹೋರಾಡುತ್ತೇನೆ. ನನ್ನನ್ನು ಮುಸ್ಲಿಂ ಎಂದು ಟ್ರೋಲ್ ಮಾಡೋರು ನಿಜವಾದ ಭಾರತೀಯರಲ್ಲ. ಅಂತವರ ಟೀಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವೂ ಇಲ್ಲ ಎಂದು ಶಮಿ ಕುಟುಕಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 3.5 ಓವರ್​ ಬೌಲ್ ಮಾಡಿದ್ದ ಶಮಿ, ಒಂದೇ ಒಂದು ವಿಕೆಟ್​ ಪಡೆಯದೇ 43 ರನ್ ನೀಡಿದ್ದರು. ಇದರಿಂದ ಕೆಲವರು ಶಮಿಯನ್ನ ಟೀಕೆ ಮಾಡಿದ್ದರು.

Edited By : Vijay Kumar
PublicNext

PublicNext

01/03/2022 05:19 pm

Cinque Terre

34.01 K

Cinque Terre

6