ಇಸ್ಲಾಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್ ಆಗಿದೆ. ಇದರ ಮುಂದೆ ಪಾಕಿಸ್ತಾನದ ಪಾಕಿಸ್ತಾನ್ ಸೂಪರ್ ಲೀಗ್ (PSL) ಏನೂ ಅಲ್ಲ. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.
PSL 2022ರ ಚಾಂಪಿಯನ್ ತಂಡ ಲಾಹೋರ್ ಖಲಂದರ್ಸ್ ಪಡೆದ ನಗದು ಬಹುಮಾನದ ಮೊತ್ತ 3.4 ಕೋಟಿ ರೂ. ಆಗಿದೆ. ಇನ್ನು ರನ್ನರ್-ಅಪ್ ತಂಡ ಮುಲ್ತಾನ್ ಸುಲ್ತಾನ್ಸ್ 1.37 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿದೆ. ಆದರೆ ಐಪಿಎಲ್ 2021ರ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 20 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿತ್ತು. ಇನ್ನು ರನ್ನರ್ ಅಪ್ ಆಗಿದ್ದ ಕೆಕೆಆರ್ ತಂಡವು 12.5 ಕೋಟಿ ರೂ. ಬಹುಮಾನವನ್ನು ತನ್ನದಾಗಿಸಿಕೊಂಡಿತ್ತು.
PublicNext
28/02/2022 09:56 pm