ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ND vs SL 2nd T20: ಲಂಕಾ ವಿರುದ್ಧವೂ ರೋ'ಹಿಟ್' ಪಡೆಗೆ ಸರಣಿ ಜಯ

ಧರ್ಮಶಾಲಾ: ಶ್ರೇಯಸ್ ಅಯ್ಯರ್ ಸ್ಫೋಟಕ ಅರ್ಧಶತಕ, ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧ .. ವಿಕೆಟ್ ಗಳಿಂದ ಗೆಲವು ಸಾಧಿಸಿದ್ದು, 2-0 ಅಂತರದಿಂದ ಸರಣಿ ವಶಕ್ಕೆ ಪಡೆದಿದೆ. ಈ ಮೂಲಕ ಭಾರತ ಸರಣಿ ಜಯದ ಓಟ ಮುಂದುವರೆಸಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಭಾರತದ ಪರ ಶ್ರೇಯಸ್ ಅಯ್ಯರ್ ಅಜೇಯ 74 ರನ್, ರವೀಂದ್ರ ಜಡೇಜಾ ಅಜೇಯ 45 ರನ್, ಸಂಜು ಸ್ಯಾಮ್ಸನ್ 39 ರನ್, ಇಶಾನ್ ಕಿಶನ್ 16 ರನ್ ಹಾಗೂ ನಾಯಕ ರೋಹಿತ್ ಶರ್ಮಾ 1 ರನ್ ಗಳಿಸಿದರು.

Edited By :
PublicNext

PublicNext

26/02/2022 10:33 pm

Cinque Terre

131.61 K

Cinque Terre

1