ಚೆನ್ನೈ: ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ ಸೋಲಿನ ರುಚಿ ಉಣಿಸಿದ್ದ ಭಾರತದ ಆರ್. ಪ್ರಜ್ಞಾನಂದ ತಮ್ಮ ಗೆಲುವಿನ ಅನುಭವಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ಗೆಲುವು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಲು ನನಗೆ ಸಾಕಷ್ಟು ಆತ್ಮವಿಶ್ವಾಸ ನೀಡಿದೆ. ಇದರ ಜತೆಗೆ ಭವಿಷ್ಯದ ಟೂರ್ನಿಗಳಿಗೂ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ ಎಂದು ಆರ್. ಪ್ರಜ್ಞಾನಂದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸದ್ಯ ನಾನು ಮುಂಬರುವ ಪಂದ್ಯಗಳತ್ತ ಗಮನ ಕೇಂದ್ರೀಕರಿಸಿದ್ದೇನೆ. ಪಂದ್ಯಗಳ ಮುಕ್ತಾಯದ ಬಳಿಕವಷ್ಟೇ ನಾನು ವಿಶ್ರಾಂತಿ ಪಡೆಯುತ್ತೇನೆ ಎಂದಿದ್ದಾರೆ. ಇದೇ ವೇಳೆ ನಾರ್ವೇ ಆಟಗಾರನ ಎದುರು ಗೆಲುವು ಸಾಧಿಸಲು ತಾವು ಯಾವುದೇ ನಿರ್ದಿಷ್ಟ ಕಾರ್ಯತಂತ್ರಗಳನ್ನು ಅನುಸರಿಸಿಲ್ಲ ಎಂಬುದನ್ನು ಪ್ರಜ್ಞಾನಂದ ಒಪ್ಪಿಕೊಂಡಿದ್ದಾರೆ. ಪ್ರಜ್ಞಾನಂದ ಅವರ ಗೆಲುವನ್ನು ಇಡೀ ವಿಶ್ವದಾದ್ಯಂತ ಕ್ರೀಡಾಸಕ್ತರು ಮೆಚ್ಚಿಕೊಂಡಿದ್ದಾರೆ.
PublicNext
23/02/2022 03:36 pm