ನವದೆಹಲಿ: ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ಗೆ ಭಾರತದ 16 ವರ್ಷದ ಆರ್. ಪ್ರಗ್ನಾನಂದ ಅವರು ಸೋಲಿನ ರುಚಿ ತೋರಿಸಿದ್ದಾರೆ.
ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಪ್ರಸಿದ್ಧಿ ಪಡೆದಿರುವ ಆರ್. ಪ್ರಗ್ನಾನಂದ ಅವರು ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ 'ಏರ್ಥಿಂಗ್ ಮಾಸ್ಟರ್ಸ್ 2022' ಆನ್ಲೈನ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಪಂದ್ಯಾವಳಿಯಲ್ಲಿ ಕಾರ್ಲ್ಸನ್ರ ಮೂರನೇ ಸರಣಿ ಗೆಲುವಿಗೆ ಆರ್. ಪ್ರಗ್ನಾನಂದ ಬ್ರೇಕ್ ಹಾಕಿದ್ದಾರೆ.
ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್‌ನ ಮೊದಲ ದಿನ ಕಠಿಣ ಸವಾಲು ಎದುರಿಸಿದ ನಂತರ ಕಾರ್ಲ್‌ಸೆನ್ ಇದೀಗ ಅತ್ಯಂತ ಕಿರಿಯ ಆಟಗಾರನ ಎದುರು ಹಿನ್ನಡೆ ಎದುರಿಸಿದರು. ಪ್ರಗ್ನಾನಂದ ನಾರ್ವೆಯ ಚೆಸ್ ಪಟುವಿನ ವಿರುದ್ಧ ಮೊದಲ ಬಾರಿ ಗೆಲುವು ದಾಖಲಿಸಿದರು. ಈ ಹಿಂದೆ ಭಾರತ ನಂ.1 ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಮತ್ತು ಪೆಂಡ್ಯಾಲ ಹರಿಕೃಷ್ಣ ಮಾತ್ರ ಈ ಸಾಧನೆಯನ್ನು ಮಾಡಿದ್ದರು. ಸದ್ಯ ಪ್ರಾಗ್, 4 ಸೋಲು ಹಾಗೂ ಎರಡು ಡ್ರಾಗಳ ಮೂಲಕ ಜಂಟಿ 12ನೇ ಸ್ಥಾನದಲ್ಲಿದ್ದರೂ, ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ.
PublicNext
21/02/2022 02:47 pm