ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6 ವರ್ಷಗಳ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಗೆ ನಂಬರ್ 1 ಪಟ್ಟ

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್‌ವಾಶ್ ಮೂಲಕ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಈಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದೆ.

2021 ನವೆಂಬರ್‌ನಿಂದ ಪ್ರಸ್ತುತ ಫೆಬ್ರವರಿ 2022ರ ಅವಧಿಯಲ್ಲಿ ಭಾರತವು 9 ಟಿ20 ಪಂದ್ಯಗಳನ್ನು ಸತತವಾಗಿ ಗೆದ್ದು ತೋರಿಸಿದೆ. ಇದಲ್ಲದೆ ಭಾರತ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನ ಪಡೆದಿದೆ. 2016ರ ಫೆಬ್ರವರಿ 12ರಿಂದ ಅದೇ ವರ್ಷ ಮೇ 3ರವರೆಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು ಈ ಹಿಂದೆ ನಂ. 1 ಆಗಿತ್ತು.

ಭಾರತ 39 ಪಂದ್ಯಗಳಿಂದ 10,484 ಪಾಯಿಂಟ್ಸ್ ಕಲೆಹಾಕಿ ಒಟ್ಟು 269 ರೇಟಿಂಗ್‌ಗಳನ್ನ ಪಡೆದಿದೆ. ಅದೇ ಇಂಗ್ಲೆಂಡ್ ತಂಡವು ಕೂಡ 39 ಪಂದ್ಯಗಳಲ್ಲಿ 10,474 ಪಾಯಿಂಟ್ಸ್ ಪೆಡದು ಒಟ್ಟು 269 ರೇಟಿಂಗ್‌ಗಳನ್ನ ಪಡೆದಿದ್ದು, ಕೂದಲೆಳೆ ಅಂತರದಲ್ಲಿ ನಂಬರ್ ಒನ್ ಸ್ಥಾನ ಬಿಟ್ಟುಕೊಟ್ಟಿದೆ.

ಮೂರು ಮತ್ತು ನಾಲ್ಕನೇ ಸ್ಥಾನವನ್ನ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಅಲಂಕರಿಸಿದ್ದು, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಐದು ಮತ್ತು ಆರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಭಾರತದೆದುರು ಹೀನಾಯ ಸೋಲು ಕಂಡ ವಿಂಡೀಸ್ ಏಳನೇ ಸ್ಥಾನದಲ್ಲಿದೆ.

Edited By : Vijay Kumar
PublicNext

PublicNext

21/02/2022 01:26 pm

Cinque Terre

67.2 K

Cinque Terre

0

ಸಂಬಂಧಿತ ಸುದ್ದಿ