ಕ್ರಿಕೆಟ್ ಆಟದಲ್ಲೂ ರಾಜಕೀಯ ಇದೆ. ಇಲ್ಲೂ ಏನೇನೋ ಆಗುತ್ತದೆ.ಇಲ್ಲಿ ಯಾವುದೂ ಈಗಂತೂ ಸರಿಯೇ ಇಲ್ಲ.ಹೀಗನ್ನೋ ಅರ್ಥದಲ್ಲಿಯೇ ಅನುಭವಿ ಆಟಗಾರ ವೃದ್ಧಿಮಾನ್ ಸಾಹ ಹೇಳಿಕೆ ನೀಡಿ ಕೆಂಡಕಾರಿದ್ದಾರೆ.
ಹೌದು! ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಇಂಡಿಯನ್ ಟೀಮ್ ಪ್ರಕಟಗೊಂಡಿದೆ. ಅದರಲ್ಲಿ ವೃದ್ಧಿಮಾನ್ ಸಾಹರನ್ನ ಕೈಬಿಡಲಾಗಿದೆ. ಇದೇ ಕಾರಣಕ್ಕೇನೆ ಸಾಹ ಸಿಟ್ಟು ಹೊರಹಾಕಿದ್ದಾರೆ.
ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಒಂದು ಸಲಹೆ ಕೊಟ್ಟಿದ್ದಾರೆ. ಅದೇನಪ್ಪ ಅಂದ್ರೆ, ಮ್ಯಾನೇಜ್‌ಮೆಂಟ್ ನಿಮ್ಮನ್ನ ಟೀಮ್ ನಲ್ಲಿ ತೆಗೆದುಕೊಳ್ಳದಿರಲುತೀರ್ಮಾನಿಸಿದೆ. ಹಾಗಾಗಿಯೇ ನೀವು ನಿವೃತ್ತಿ ಘೋಷಿಸೋದು ಒಳ್ಳೆಯದು ಅಂತಲೇ ಹೇಳಿದ್ದಾರೆ. ಅದಕ್ಕೇನೆ ಸಾಹ ಕೆಂಡಾಮಂಡಲವಾಗಿ ಬಿಟ್ಟಿದ್ದಾರೆ.
ವೃದ್ಧಿಮಾನ್ ನೀವೂ ಚಿಂತಿಸಬೇಡಿ. ನೀವು ಇಂಡಿಯನ್ ಟೀಂ ನಲ್ಲಿ ಇರುತ್ತೀರಾ ಅಂತಲೇ ಭರವಸೆ ಕೊಟ್ಟಿದ್ದಾರೆ. ಆದರೆ ಈಗ ಸಾಹ ಟೀಮ್ ಅಲ್ಲಿ ಇಲ್ಲವೇ ಇಲ್ಲ. ಹೀಗಿರೋವಾಗ ಗಂಗೂಲಿ ಮೌನಕ್ಕೆ ಜಾರಿ ಬಿಟ್ಟಿದ್ದಾರೆ. ಗಂಗೂಲಿಯ ಈ ವರ್ತನೆಯಿಂದ ವೃದ್ಧಿಮಾನ್ ಸಿಟ್ಟುಹೊರ ಹಾಕಿದ್ದಾರೆ.
ವೃದ್ಧಿಮಾನ್ ಬೆಳಕು ಚೆಲ್ಲಿದ ಈ ಸತ್ಯ ಈಗ ಕ್ರಿಕೆಟ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
PublicNext
21/02/2022 12:18 pm