ಭಾರತ ಮತ್ತು ವೆಸ್ಟ್ ಇಂಡೀಸ್ ತಂಡದ T20 ಸರಣಿಯ ಕೊನೆ ಪಂದ್ಯ ನಾಳೆ ನಡೆಯಲಿದೆ. ಅದಕ್ಕೂ ಮೊದಲೇ ಈಗ ಭಾರತ ಮತ್ತು ಶ್ರೀಲಂಕಾ ಸರಣಿ ಮತ್ತು T20 ಪಂದ್ಯದ ಭಾರತದ ತಂಡದಲ್ಲಿ ಯಾರೆಲ್ಲ ಇರ್ತಾರೆ ಅನ್ನೋದು ಈಗ ರಿವೀಲ್ ಆಗಿದೆ.
ಹೌದು ! ರೋಹಿತ್ ಶರ್ಮಾ ಭಾರತ ತಂಡವನ್ನ ಮುನ್ನೆಡೆಸಿಕೊಂಡು ಹೊಗಲಿದ್ದಾರೆ. ಕೆ.ಎಲ್.ರಾಹುಲ್ ಅಲಭ್ಯವಾಗಿರೋದರಿಂದಲೇ ಜಸ್‌ಪ್ರಿತ್ ಬೂಮ್ರಾಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ಗಾಯಗೊಂಡಿದ್ದ ರವೀಂದ್ರ ಜಡೇಜಾ ಕಮ್ ಬ್ಯಾಕ್ ಮಾಡಿದ್ದಾರೆ. ಅಜಿಂಕ್ಯ ರಹಾನೆ,ಚೇತೇಶ್ವರ್ ಪೂಜಾರ್,ವೃದ್ಧಿಮಾನ್ ಸಾಹ, ಇಶಾಂತ್ ರನ್ನ ಈ ಸರಣಿ ಪಂದ್ಯದಿಂದ ಡ್ರಾಪ್ ಮಾಡಲಾಗಿದೆ. ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿ ವೇಳಾಪಟ್ಟಿ
ಲಕ್ನೋ: ಫೆ.24 ರಂದು ಮೊದಲ ಟಿ20 ಪಂದ್ಯ
ಧರ್ಮಶಾಲಾ:ಫೆ.26 ರಂದು ಎರಡನೇ ಟಿ20 ಪಂದ್ಯ
ಧರ್ಮಶಾಲಾ:ಫೆ.27 ರಂದು ಮೂರನೇ ಟಿ20 ಪಂದ್ಯ
======
ಮೊದಲ ಟೆಸ್ಟ್ ಪಂದ್ಯ-ಮೋಹಾಲಿ-4ರಿಂದ ಮಾರ್ಚ್8 ವರೆಗೆ
ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಲ್ಲಿ (ಹಗಲು-ರಾತ್ರಿ) ಮಾರ್ಚ್-12 ಮತ್ತು 13
PublicNext
19/02/2022 10:37 pm