ಬೆಂಗಳೂರು: ಐಪಿಎಲ್ 2022 ಆಟಗಾರರ ಹರಾಜು ಪ್ರಕ್ರಿಯೆ, ಈಗ ಮುಗಿದ ಅಧ್ಯಾಯ. ಇದೀಗ ಅಭಿಮಾನಿಗಳ ವಲಯದಲ್ಲಿ ಯಾವ ತಂಡವನ್ನು ಬೆಂಬಲಿಸಬೇಕು ಎನ್ನುವ ಲೆಕ್ಕಾಚಾರ ಜೋರಾಗಿದೆ. ಅದರಲ್ಲೂ ನಮ್ಮ ಕರ್ನಾಟಕದ ಫ್ಯಾನ್ಸ್ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ.
ಅಭಿಮಾನಿಗಳ ವಲಯದಲ್ಲಿ ಯಾವ ತಂಡಕ್ಕೆ ಸಪೋರ್ಟ್ ಮಾಡಬೇಕು ಎಂಬ ಚರ್ಚೆ ಹುಟ್ಟಿರೋದಕ್ಕೆ ಇದೇ ಕಾರಣ. ಕನ್ನಡಿಗರನ್ನ ಹರಾಜಿನಲ್ಲಿ ಕಡೆಗಣಿಸಿದ ಆರ್ಸಿಬಿ, ಟೀಕೆಗಳಿಂದ ತಪ್ಪಿಸಿಕೊಳ್ಳಲೇನೋ ಎಂಬಂತೆ ಇಬ್ಬರು ಆಟಗಾರರನ್ನ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಆದರೆ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗೋ ಸಾಧ್ಯತೆ ತೀರಾ ಕಡಿಮೆಯಿದೆ. ಆದ್ರೆ, ಲಕ್ನೋ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕನ್ನಡದ ಆಟಗಾರರ ದಂಡೇ ಇದೆ. ಈ ಹಿಂದೆ ಪಂಜಾಬ್ ತಂಡದಲ್ಲೂ ಕನ್ನಡಿಗರ ಸಂಖ್ಯೆ ಹೆಚ್ಚಾಗಿತ್ತು. ಆಗ ಆರ್ಸಿಬಿ ಬಿಟ್ರೆ ನಮ್ಮವರ ಬೆಂಬಲ ಪಂಜಾಬ್ ತಂಡಕ್ಕೇ ಇತ್ತು.
ಐಪಿಎಲ್ ತಂಡಗಳ ಪೈಕಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿರುವುದು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ. ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್, ಕೆ.ಸಿ.ಕಾರಿಯಪ್ಪ, ಈ ಬಾರಿ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಆಟಗಾರರ ಹರಾಜಿನಲ್ಲಿ ಈ ನಾಲ್ವರು ಕನ್ನಡಿಗರನ್ನ ಖರೀದಿಸಿರುವ ರಾಜಸ್ಥಾನ್, ಕರ್ನಾಟಕ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ.
PublicNext
18/02/2022 09:30 pm