ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಭಾರತದ ಆಡುವ ಬಳಗದಿಂದ ಪ್ರಮುಖ ಆಟಗಾರ ಶ್ರೇಯಸ್ ಐಯ್ಯರ್ ಹೊರಗುಳಿದಿದ್ದರು. ಈ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿತ್ತು.
ಈ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ್ದು, 'ಶ್ರೇಯಸ್ ಐಯ್ಯರ್ ಅವರಂತಹ ಆಟಗಾರನನ್ನು ಆಡುವ ಬಳಗದಿಂದ ಹೊರಗಿಡುವುದು ಬಹಳ ಕಷ್ಟದ ಕೆಲಸ. ಆದರೆ ಮಧ್ಯದಲ್ಲಿ ಬೌಲಿಂಗ್ ಮಾಡಬಲ್ಲ ಆಟಗಾರನ ಅಗತ್ಯ ನಮಗಿತ್ತು. ಹಾಗಾಗಿ ಶ್ರೇಯಸ್ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
'ಶ್ರೇಯಸ್ ಐಯ್ಯರ್ ಸ್ಥಾನದ ಬಗ್ಗೆ ನಾವು ಬಹಳ ಸ್ಪಷ್ಟತೆಯನ್ನು ಹೊಂದಿದ್ದೇವೆ. ವಿಶ್ವಕಪ್‌ಗೆ ಬೌಲಿಂಗ್ ಜೊತೆಗಿನ ಆಯ್ಕೆಯನ್ನು ಬಯಸುತ್ತಿರುವುದನ್ನು ಹೇಳಿದ್ದೇವೆ. ತಂಡ ಯಾವುದನ್ನು ಬಯಸುತ್ತದೆಯೋ ಅದನ್ನು ನಮ್ಮ ಆಟಗಾರರು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲಾ ಆಟಗಾರರು ಕೂಡ ವೃತ್ತಿಪರತಾಗಿರುವ ಕಾರಣ ತಂಡ ಮೊದಲು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಎಲ್ಲರೂ ಲಭ್ಯವಾದ ಸಂದರ್ಭದಲ್ಲಿ ನಾವು ಕುಳಿತು ಚರ್ಚಿಸಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
PublicNext
17/02/2022 04:46 pm