ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡ ಮೊದಲ T20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಗೆಲುವು ಸಾಧಿಸಿ ಬೀಗಿದೆ.ಮೂರು ಪಂದ್ಯಗಳಲ್ಲಿ 1-0 ಮುನ್ನಡೆ ಸಾಧಿಸಿದೆ.
ಆಕ್ರಮಣಕಾರಿ ಬೌಲಿಂಗ್, ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ಯಾಪ್ಟನ್ ರೋಹಿತ್ ಪಡೆ ವೆಸ್ಟ್ ಇಂಡೀಸ್ ವಿರುದ್ದ ಸರಣಿಯ ಮೊದಲ ಪಂದ್ಯವನ್ನೇ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಮೇಲೆ ಬೌಲಿಂಗ್ ದಾಳಿಯನ್ನೇ ಮಾಡಿದೆ. ಒಟ್ಟು 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ ವೆಸ್ಟ್ ಇಂಡೀಸ್,ಭಾರತ ತಂಡಕ್ಕೆ 158 ರನ್ ಗಳ ಗುರಿ ನೀಡಿತು. ಭಾರತ ತಂಡದ ಸೂರ್ಯಕುಮಾರ್ ಹಾಗೂ ವೆಂಕಟೇಶ್ ಅಯ್ಯರ್ 48 ರನ್ ಗಳ ಜೊತೆಯಾಟದೊಂದಿಗೆ ಭಾರತ ತಂಡ 6 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
PublicNext
16/02/2022 11:19 pm