ನಾಳೆ ಫೆ.16 ರಿಂದ ಆರಂಭವಾಗಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟಿ 20 ಸರಣಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭಗೊಳ್ಳಲಿದೆ. ಮೂರು ಪಂದ್ಯಗಳ ಟಿ 20 ಸರಣಿ ಇದಾಗಿದ್ದು, ಈಗಾಗಲೇ ಟೀಮ್ ಇಂಡಿಯಾ ಅಭ್ಯಾಸದಲ್ಲಿ ನಿರತವಾಗಿದೆ. ಕೆಎಲ್ ರಾಹುಲ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಸರಣಿ ಆರಂಭಕ್ಕೂ ಮುನ್ನವೇ ಹೊರಬಿದ್ದಿರುವುದು ತಂಡಕ್ಕೆ ಸ್ವಲ್ಪ ಹಿನ್ನಡೆಯಾಗಿದೆ.
ಆದರೆ, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡ್ ಮತ್ತು ಕುಲ್ದೀಪ್ ಯಾದವ್ ಹೊಸದಾಗಿ ತಂಡ ಸೇರಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುದ್ದಿಗೊಷ್ಠಿ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮೊದಲ ಟಿ20 ಪಂದ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20 ಎಲ್ಲಾ 3 ಪಂದ್ಯಗಳು ಸಹ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಫೆ. 16 ಮೊದಲ ಪಂದ್ಯ, 18 ಎರಡನೇ ಹಾಗೂ ಅಂತಿಮ ಮೂರನೇ ಟಿ20 ಫೆಬ್ರವರಿ 20 ಭಾನುವಾರದಂದು ಜರುಗಲಿದೆ. ಎಲ್ಲ ಪಂದ್ಯ ಸಂಜೆ 7 ಗಂಟೆಗೆ ಶುರುವಾಗಲಿದೆ.
PublicNext
15/02/2022 12:03 pm