ಬೆಂಗಳೂರು: ಭಾರತಕ್ಕೆ ಅಂಡರ್-19 ವಿಶ್ವಕಪ್ 2022 ಗೆದ್ದು ಕೊಟ್ಟ ನಾಯಕ ಯಶ್ ಧುಲ್‌ಗೆ ಅದೃಷ್ಟ ಖುಲಾಯಿಸಿದೆ. ಭಾರತದ ಜೂನಿಯರ್ ತಂಡದ ನಾಯಕ ಮತ್ತು ಪ್ರತಿಭಾನ್ವಿತ ಬ್ಯಾಟರ್ ತಂಡವನ್ನು ಐದನೇ ಬಾರಿಗೆ ವಿಶ್ವ ಚಾಂಪಿಯನ್‌ನನ್ನಾಗಿ ಮಾಡಿದರು ಮತ್ತು ಸ್ವತಃ ಬ್ಯಾಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಅವರ ಡಬಲ್ ಯಶಸ್ಸಿನ ಪರಿಣಾಮವು ಐಪಿಎಲ್ 2022ರ ಹರಾಜಿನಲ್ಲಿ ಗೋಚರಿಸಿದೆ. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷ ರೂ.ಗೆ ಖರೀದಿಸಿದೆ.
ಐಪಿಎಲ್ ಹರಾಜಿನಲ್ಲಿ 19 ವರ್ಷದ ಯುವ ಕ್ರಿಕೆಟಿಗ ಯಶ್ ಧುಲ್‌ಗೆ 20 ಲಕ್ಷ ರೂಪಾಯಿ ಮೂಲ ಬೆಲೆಯನ್ನು ನಿಗದಿ ಮಾಡಲಾಗಿತ್ತು. ಆದರೆ ಅವರನ್ನು ಖರೀದಿಸುವ ಬಗ್ಗೆ ಫ್ರಾಂಚೈಸಿಗಳ ನಡುವೆ ಹೆಚ್ಚಿನ ಪೈಪೋಟಿ ಇರಲಿಲ್ಲ. ದೆಹಲಿ ಹೊರತುಪಡಿಸಿ, ಪಂಜಾಬ್ ಕಿಂಗ್ಸ್ ಅವರ ಮೇಲೆ ಮಾತ್ರ ಬಿಡ್ ಮಾಡಿದೆ. 2022ರ ಅಂಡರ್ 19 ವಿಶ್ವಕಪ್ನಲ್ಲಿ ಧುಲ್ 229 ರನ್ ಗಳಿಸಿ ಮಿಂಚಿದ್ದರು.
PublicNext
13/02/2022 06:15 pm