ಬೆಂಗಳೂರು: ಕನ್ನಡಿಗ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಅವರು ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ.
33 ವರ್ಷದ ಕೃಷ್ಣಪ್ಪ ಗೌತಮ್ ಅವರು ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲಿ ಸಿಎಸ್‌ಕೆ ತಂಡಕ್ಕೆ ದಾಖಲೆಯ 9.25 ಕೋಟಿ ರೂಪಾಯಿ ಮೊತ್ತಕ್ಕೆ ಬಿಕರಿಯಾಗಿದ್ದರು. ಆದರೆ 2022ರ ಮೆಗಾ ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿ ಕೇವಲ 90 ಲಕ್ಷ ರೂಪಾಯಿಗಳಿಗೆ ಅವರನ್ನು ಖರೀದಿ ಮಾಡಿದೆ.
ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಅವರ ನಂಬಿಕೆ ಗಳಿಸಲು ಕೃಷ್ಣಪ್ಪ ಗೌತಮ್ ವಿಫಲರಾಗಿದ್ದರು. ಪರಿಣಾಮ ಭಾರೀ ಮೊತ್ತ ಪಡೆದು ಒಂದೇ ಒಂದು ಪಂದ್ಯದಲ್ಲಿ ಆಡೋ ಅವಕಾಶವನ್ನು ಗಳಿಸಲಿಲ್ಲ. ಐಪಿಎಲ್ನಲ್ಲಿ ಇದುವರೆಗೂ 24 ಮ್ಯಾಚ್ಗಳನ್ನು ಆಡಿರುವ ಕೃಷ್ಣಪ್ಪ 24 ಪಂದ್ಯಗಳಲ್ಲಿ 13 ವಿಕೆಟ್ ಪಡೆದುಕೊಂಡು, 186 ರನ್ ಗಳಿಸಿದ್ದಾರೆ.
PublicNext
13/02/2022 05:36 pm