ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022:​ ನವದೀಪ್​​ ಸೈನಿ ರಾಜಸ್ಥಾನ ರಾಯಲ್ಸ್​ ಪಾಲು

ಬೆಂಗಳೂರು: ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ವೇಗಿ ಬೌಲರ್​​​​ ನವದೀಪ್​ ಸೈನಿ ಈಗ ರಾಜಸ್ಥಾನ ರಾಯಲ್ಸ್​ ತಂಡ ಸೇರಿದ್ದಾರೆ.

ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ಎರಡನೇ ದಿನದ ಐಪಿಎಲ್​​ ಮೆಗಾ ಹರಾಜಿನಲ್ಲಿ 75 ಲಕ್ಷ ರೂ ಮೂಲ ಬೆಲೆಗೆ ಲಕ್ನೋ ತಂಡ ನವದೀಪ್​ ಸೈನಿ ಅವರನ್ನು ಮೊದಲಿಗೆ ಬಿಡ್​​ ಮಾಡಿತ್ತು. ನಂತರ ರಾಜಸ್ಥಾನ ರಾಯಲ್ಸ್​ ಟೀಂ ಸೈನಿಗಾಗಿ ಬಿಡ್​​ ಮುಂದುವರಿಸಿತ್ತು. ಕೆಲ ಕಾಲ ಸೈನಿಗಾಗಿ ಮುಂಬೈ ಇಂಡಿಯನ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ಭಾರೀ ಪೈಪೋಟಿ ನಡೆಯಿತು. ಯಾವಾಗ ಬಿಡ್​ ಬೆಲೆ 2 ಕೋಟಿ 2.4 ಕೋಟಿಗೆ ಏರಿತೋ ಆಗ ಮುಂಬೈ ಡ್ರಾಪ್​ ಆಗಿದೆ. ಕೊನೆಗೂ ರಾಜಸ್ಥಾನ ರಾಯಲ್ಸ್​ ತಂಡ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರನನ್ನು 2.4 ಕೋಟಿ ನೀಡಿ ಪರ್ಚೇಸ್​ ಮಾಡಿದೆ.

Edited By : Vijay Kumar
PublicNext

PublicNext

13/02/2022 04:17 pm

Cinque Terre

31.02 K

Cinque Terre

0

ಸಂಬಂಧಿತ ಸುದ್ದಿ