ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ಮೂಲದ ಗೆಳತಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಮ್ಯಾಕ್ಸ್‌ವೆಲ್

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಾರತೀಯ ಮೂಲದ ಯುವತಿ ಜೊತೆ ಎರಡು ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್ ಕೊನೆಗೂ ತಮ್ಮ ಮನದರಸಿಯ ವಿನಿ ರಾಮನ್ ಜೊತೆ ಹಿಂದೂ ಹಾಗೂ ಆಸ್ಟ್ರೇಲಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮದುವೆಯ ಆಮಂತ್ರಣ ಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಇರುವ ಮಾಹಿತಿ ಪ್ರಕಾರ ಮ್ಯಾಕ್ಸ್‌ವೆಲ್ ಮಿನಿ ಅವರ ಜೊತೆಗೆ ಮಾರ್ಚ್ 27ರಂದು ಮೆಲ್ಬೋರ್ನ್‌ ನಲ್ಲಿ ಮದುವೆಯಾಗಲಿದ್ದಾರೆ. ಗ್ಲೆನ್ ಮ್ಯಾಕ್ಸ್​ವೆಲ್ ಅವರು ಮದುವೆಯಾಗುತ್ತಿರುವ ಹುಡುಗಿ ವಿನಿ ರಾಮನ್ ತಮಿಳುನಾಡು ಮೂಲದವರಾದವರೂ ಹುಟ್ಟಿ ಬೆಳೆದದ್ದೆಲ್ಲಾ ಆಸ್ಟ್ರೇಲಿಯಾದಲ್ಲೇ. ಮೆಡಿಕಲ್ ಸೈನ್ಸ್ ಓದಿರುವ ಇವರು ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

Edited By : Vijay Kumar
PublicNext

PublicNext

13/02/2022 04:07 pm

Cinque Terre

49.11 K

Cinque Terre

1

ಸಂಬಂಧಿತ ಸುದ್ದಿ