ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನವೇ ಹೊಸ ದಾಖಲೆಯೇ ಸೃಷ್ಟಿಯಾಗಿದೆ.
ಹೌದು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಸೀಸನ್‌ನಲ್ಲಿ 10 ಆಟಗಾರರು 10 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ. ಈ ಮೂಲಕ 10 ಯುವ ಆಟಗಾರರು 10 ಕೋಟಿ ರೂಪಾಯಿ ಕ್ಲಬ್ ಸೇರಿದ್ದಾರೆ. ಐಪಿಎಲ್ 2022ರ ಹರಾಜಿನ ಮೊದಲ ದಿನದಲ್ಲಿ ಒಟ್ಟು 10 ಫ್ರಾಂಚೈಸಿಗಳು ಕೆಲವು ಪ್ರಮುಖ ಆಟಗಾರರನ್ನ ಪಡೆಯಲು ಸಾಕಷ್ಟು ಬಿಡ್ ನಡೆಸಿದರ ಪರಿಣಾಮವೇ ಅನೇಕ ಆಟಗಾರರ ಮೊತ್ತಕ್ಕೆ ಗಗನಕ್ಕೇರಿತು. ಅದ್ರಲ್ಲೂ ಮೂಲ ಬೆಲೆ 40 ಲಕ್ಷ ರೂ.ದಿಂದ 1 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಆಟಗಾರರು 10 ಕೋಟಿ ರೂಪಾಯಿ ಬಿಡ್ ದಾಟಲು ಸಾಧ್ಯವಾಗಿದೆ.
10 ಕೋಟಿ ರೂಪಾಯಿ ಕ್ಲಬ್ ಸೇರಿದ 10 ಆಟಗಾರರು:
* ಇಶಾನ್ ಕಿಶನ್: 15.25 ಕೋಟಿ ರೂ. (ಮುಂಬೈ ಇಂಡಿಯನ್ಸ್)
* ದೀಪಕ್ ಚಹಾರ್: 14 ಕೋಟಿ ರೂ. (ಚೆನ್ನೈ ಸೂಪರ್ ಕಿಂಗ್ಸ್)
* ಶ್ರೇಯಸ್ ಅಯ್ಯರ್: 12.25 ಕೋಟಿ ರೂ. (ಕೋಲ್ಕತ್ತಾ ನೈಟ್ ರೈಡರ್ಸ್)
* ಶಾರ್ದೂಲ್ ಠಾಕೂರ್: 10.75 ಕೋಟಿ ರೂ. (ಡೆಲ್ಲಿ ಕ್ಯಾಪಿಟಲ್ಸ್)
* ಹರ್ಷಲ್ ಪಟೇಲ್: 10.75 ಕೋಟಿ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
* ನಿಲೋಲಸ್ ಪೂರನ್: 10.75 ಕೋಟಿ ರೂ. (ಸನ್‌ರೈಸರ್ಸ್ ಹೈದ್ರಾಬಾದ್)
* ವಹಿಂದು ಹಸರಂಗ: 10.75 ಕೋಟಿ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
* ಲ್ಯೂಕಿ ಫರ್ಗುಸನ್: 10 ಕೋಟಿ ರೂ. (ಗುಜರಾತ್ ಟೈಟನ್ಸ್)
* ಪ್ರಸಿದ್ಧ ಕೃಷ್ಣ: 10 ಕೋಟಿ ರೂ. (ರಾಜಸ್ತಾನ್ ರಾಯಲ್ಸ್)
* ಅವೇಶ್ ಖಾನ್: 10 ಕೋಟಿ ರೂ. (ಲಕ್ನೋ ಸೂಪರ್ ಜಾಯಿಂಟ್ಸ್)
PublicNext
13/02/2022 12:43 pm