ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs WI 3rd ODI: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ- ಕೆಎಲ್‌ಗೆ ವಿಶ್ರಾಂತಿ

ಅಹಮದಾಬಾದ್: ವೆಸ್ಟ್‌ ಇಂಡೀಸ್ ವಿರುದ್ಧದ ಏಕದಿನ ಸರಣಿಯ ತೃತೀಯ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಕ್ಲೀನ್​ ಸ್ವೀಪ್ ಸಾಧನೆ ಮಾಡಲಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಮುಖ ನಾಲ್ಕು ಬದಲಾವಣೆಗಳೊಂದಿಗೆ ಮೈದಾನಕ್ಕೆ ಇಳಿದಿದೆ. ಶಿಖರ್ ಧವನ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್ ಹಾಗೂ ಕುಲದೀಪ್ ಯಾದವ್‌ ಅವರಿಗೆ ಪ್ಲೆಯಿಂಗ್ ಎಲೆವೆನ್‌ನಲ್ಲಿ ಅವಕಾಶ ನೀಡಲಾಗಿದೆ. ಪರಿಣಾಮ ಉಪ ನಾಯಕ ಕೆ.ಎಲ್.ರಾಹುಲ್, ದೀಪಕ್ ಹೂಡಾ, ಶಾರ್ದೂಲ್ ಠಾಕೂರ್ ಹಾಗೂ ಯಜುವೇಂದ್ರ ಚಾಹಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

Edited By : Vijay Kumar
PublicNext

PublicNext

11/02/2022 01:42 pm

Cinque Terre

100.52 K

Cinque Terre

0

ಸಂಬಂಧಿತ ಸುದ್ದಿ