ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs WI 3rd ODI: ಕ್ಲೀನ್​ ಸ್ವೀಪ್ ಭರವಸೆಯಲ್ಲಿ ಟೀಂ ಇಂಡಿಯಾ

ಅಹಮದಾಬಾದ್: ವೆಸ್ಟ್‌ ಇಂಡೀಸ್ ವಿರುದ್ಧದ ಟೀಂ ಇಂಡಿಯಾದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವು ಇಂದು ನಡೆಯಲಿದೆ. ಈಗಾಗಲೇ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ರೋಹಿತ್ ಬಳಗ ಕ್ಲೀನ್​ ಸ್ವೀಪ್ ಸಾಧಿಸುವ ಉತ್ಸುಕತೆಯಲ್ಲಿದೆ. ಕಳೆದ 20 ವರ್ಷಗಳಿಂದ ಭಾರತದಲ್ಲಿ ಏಕದಿನ ಸರಣಿ ಗೆಲ್ಲದೇ ನಿರಾಸೆಗೊಳಾಗಿರುವ ವಿಂಡೀಸ್ ಇಂದಿನ ಪಂದ್ಯದಲ್ಲಿ ಗೆದ್ದು 3-0​ ಮುಖಭಂಗ ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ.

ಅಂತಿಮ​​ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಂದಿಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಅನುಭವಿ ಶಿಖರ್ ಧವನ್​ ಕೋವಿಡ್​ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಅವಕಾಶ ಸಿಗಲಿದೆ. ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶನ್ ಕಿಶನ್ ಹಾಗೂ ರಿಷಭ್ ಪಂತ್ ವೈಫಲ್ಯ ಅನುಭವಿಸಿದ್ದು ಇಂದಿನ ಪಂದ್ಯದಲ್ಲಿ ಶಿಖರ್ ಧವನ್ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದರ ಜೊತೆಗೆ ಮೊದಲೆರಡು ಪಂದ್ಯಗಳಿಂದ ಬೆಂಚ್ ಕಾಯುತ್ತಿರುವ ಆಟಗಾರರು ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಕಾಣುತ್ತಿದೆ.

ಪ್ರಮುಖವಾಗಿ ಕುಲದೀಪ್ ಯಾದವ್, ಯುವ ಬೌಲರ್ ರವಿ ಬಿಷ್ಣೋಯ್​ಗೆ ಚಾನ್ಸ್​ ಸಿಗುವ ಸಾಧ್ಯತೆಯೂ ಇದ್ದು, ವಾಷಿಂಗ್ಟನ್​ ಅಥವಾ ಚಹಾಲ್​ ಅವರನ್ನು ಹೊರಗಿಡಬಹುದು. ಆವೇಶ್ ಖಾನ್​ಗೆ ಅವಕಾಶ ನೀಡಿದರೆ, ವೇಗಿ ಮೊಹಮ್ಮದ್ ಸಿರಾಜ್​ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

Edited By : Vijay Kumar
PublicNext

PublicNext

11/02/2022 07:32 am

Cinque Terre

52.14 K

Cinque Terre

1

ಸಂಬಂಧಿತ ಸುದ್ದಿ