ಅಹಮದಾಬಾದ್: ಸೂರ್ಯಕಾಂತ್ ಯಾದವ್ ಅರ್ಧಶತಕ, ಕೆ.ಎಲ್. ರಾಹುಲ್ ಸಮಯೋಜಿತ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡವು ವೆಸ್ಟ್ ಇಂಡೀಸ್ ತಂಡಕ್ಕೆ 238 ರನ್‌ಗಳ ಗುರಿ ನೀಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದೆ. ಟೀಂ ಇಂಡಿಯಾ ಪರ ಸೂರ್ಯಕಾಂತ್ ಯಾದವ್ 64 ರನ್, ಕೆ.ಎಲ್. ರಾಹುಲ್ 49 ರನ್, ದೀಪಕ್ ಹೂಡಾ 29 ರನ್ ಹಾಗೂ ವಾಷಿಂಗ್ಟನ್ ಸುಂದರ್ 24 ರನ್ ಗಳಿಸಿದರು.
PublicNext
09/02/2022 05:32 pm