ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs WI 2nd ODI: ಜಸ್ಟ್‌ 1 ರನ್‌ನಿಂದ ತಪ್ಪಿತು ಕೆಎಲ್ ಅರ್ಧಶತಕ; ತಪ್ಪು ಮಾಡಿದ್ರಾ ರಾಹುಲ್?

ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಉಪ ನಾಯಕ ಕೆ.ಎಲ್.ರಾಹುಲ್ ಕೇವಲ ಒಂದು ರನ್‌ನಿಂದ ಅರ್ಧಶತಕ ತಪ್ಪಿಸಿಕೊಂಡಿದ್ದಾರೆ.

ಮೊದಲು ಟಾಸ್​ ಗೆದ್ದು ವೆಸ್ಟ್​ ಇಂಡೀಸ್​ ಬೌಲಿಂಗ್ ಆಯ್ದುಕೊಂಡಿದೆ. ಈಗ ಬ್ಯಾಟಿಂಗ್​​ ಮಾಡುತ್ತಿರುವ ಟೀಂ ಇಂಡಿಯಾ 46 ಓವರ್​​ನಲ್ಲಿ 7 ವಿಕೆಟ್​ ಕಳೆದುಕೊಂಡು 212 ರನ್​ ಬಾರಿಸಿದೆ. ಭಾರತದ ಪರ ನಾಯಕ ರೋಹಿತ್​​ ಶರ್ಮಾ 8 ಬಾಲ್​ನಲ್ಲಿ 6 ರನ್​​ ಗಳಿಸಿ ಔಟಾದರು. ನಂತರ ವಿರಾಟ್​​ ಕೊಹ್ಲಿ, ಪಂತ್ ಕೂಡ ಅವಸರದಲ್ಲಿ ತಲಾ 18 ರನ್​ ಬಾರಿಸಿ ವಿಕೆಟ್​ ಒಪ್ಪಿಸಿದರು.

ನಂತರ ಕ್ರೀಸ್​​ಗೆ ಬಂದ ಕೆ.ಎಲ್​ ರಾಹುಲ್​​​, ತುಂಬಾ ತಾಳ್ಮೆಯಿಂದಲೇ ಇನ್ನಿಂಗ್ಸ್​ ಕಟ್ಟಿದರು. ಇನ್ನೇನು ರಾಹುಲ್​ ಅರ್ಧಶತಕಕ್ಕೆ 2 ರನ್​​ ಬೇಕಿತ್ತು. ಆಗ 29.2 ಓವರ್​​ನಲ್ಲಿ ರೋಚ್​​​ ಬೌಲಿಂಗ್​ನಲ್ಲಿ ಬೌಂಡರಿ ಹೊಡೆಯಲು ಹೋದರು ರಾಹುಲ್. ಆಗ ಶಾಟ್​ ಸರಿಯಾಗಿ ಕನೆಕ್ಟ್​ ಆಗದೆ ಎರಡು ರನ್​ ಓಡಲು ಮುಂದಾದರು. ಕೆ.ಎಲ್​​ ರಾಹುಲ್​​ ಒಂದು ರನ್​ ತೆಗೆದುಕೊಳ್ಳಬೇಕಿತ್ತು. ಬದಲಿಗೆ 2 ರನ್​ ತೆಗೆಯಲು ಹೋಗಿ ರನ್​ ಔಟಾದರು.

Edited By : Vijay Kumar
PublicNext

PublicNext

09/02/2022 05:00 pm

Cinque Terre

69.78 K

Cinque Terre

2

ಸಂಬಂಧಿತ ಸುದ್ದಿ