ಭಾರತ ಮತ್ತು ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯ ಇಂದು ಆರಂಭಗೊಳ್ಳಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿಯೇ ಇಂದು ಮಧ್ಯಾಹ್ನ 1.30 ಕ್ಕೆ ಪಂದ್ಯ ಶುರು ಆಗುತ್ತಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿಯೇ ಟೀಂ ಇಂಡಿಯಾ ಎರಡನೇ ಗೆಲುವಿನತ್ತ ಚಿತ್ತ ಹರಿಸಿದೆ. ಈಗಾಗಲೇ ಒಂದು ಪಂದ್ಯವನ್ನ ಗೆದ್ದಿರೋ ಭಾರತೀಯ ತಂಡ, ಈ ಒಂದು ಪಂದ್ಯ ಗೆದ್ದರೆ ಮುಗೀತು. ಸರಣಿ ಟೀಂ ಇಂಡಿಯಾ ಕೈವಶವಾದಂತೇನೆ ಬಿಡಿ.
ಆದರೆ ವೆಸ್ಟ್ ಇಂಡೀಸ್ ಸರಣಿ ಉಳಿಸಿಕೊಳ್ಳಲು ಹೋರಾಡಲೇ ಬೇಕಾಗಿದೆ. ಇನ್ನು ಪಿಚ್ ವಿಚಾರಕ್ಕೆ ಬಂದ್ರೆ ಈ ಪಿಚ್ ಸ್ಪಿನ್ ಬೌಲಿಂಗ್ ಗೆ ಹೊಂದಿಕೊಳ್ಳುತ್ತದೆ.
ಸರಣಿಯ ಮೊದಲ ಪಂದ್ಯದಲ್ಲಿ ಕೆ.ಎಲ್.ರಾಹುಲ್ ವೈಯುಕ್ತಿಕ ಕಾರಣದಿಂದ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಈ ಏಕ ದಿನ ಎರಡನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಸೇರ್ಪಡೆ ಆಗಲಿದ್ದಾರೆ. ಈ ಮೂಲಕ ಟೀಂ ಇಂಡಿಯಾಗೆ ಮತ್ತಷ್ಟು ಬಲ ಬಂದಂತಾಗಿದೆ.
PublicNext
09/02/2022 09:09 am