ಆಂಟಿಗುವಾ: ರಾಜ್ ಬಾವಾ ಹಾಗೂ ರವಿ ಕುಮಾರ್ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಕಿರಿಯರ ಬಳಗವು ಟೀಂ ಇಂಡಿಯಾ ಕಿರಿಯರ ಬಳಗಕ್ಕೆ ಕೇವಲ 190 ರನ್‌ಗಳ ಸಾಧಾರಣ ಗುರಿ ನೀಡಿದೆ.
ಐಸಿಸಿ ಅಂಡರ್-19 ವುಶ್ಚಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು 44.5 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲು ಶಕ್ತವಾಯಿತು. ಇಂಗ್ಲೆಂಡ್ ಪರ ಜ್ಯಾಮೆಸ್ ರೇವ್ 95 ರನ್ ಹಾಗೂ ಜ್ಯಾಮೆಸ್ ಸ್ಯಾಲೆಸ್ 34 ರನ್ ಗಳಿಸಿದರು.
ಭಾರತದ ಪರ ರಾಜ್ ಬಾವಾ 5 ವಿಕೆಟ್ ಹಾಗೂ ರವಿ ಕುಮಾರ್ ತಂಡಕ್ಕೆ ಆಸರೆಯಾದರು. ಇನ್ನು ಕೌಶಲ್ ತಾಂಬೆ 1 ವಿಕೆಟ್ ಉರುಳಿಸಿದರು.
PublicNext
05/02/2022 10:32 pm